ADVERTISEMENT

ಮಗುವಿನ ಹೃದಯ ಚಿಕಿತ್ಸೆಗೆ ನೆರವಾಗಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 15:50 IST
Last Updated 3 ಫೆಬ್ರುವರಿ 2011, 15:50 IST


ನನ್ನ ಎರಡು ತಿಂಗಳ ಹೆಣ್ಣು ಮಗು ನ್ಯೂಮೋನಿಯಾ ಮತ್ತು ಹೃದಯದ ತೊಂದರೆಯಿಂದ ನರಳುತ್ತಿದ್ದರಿಂದ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ಕಳೆದ 40ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಮಗುವಿನ ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಲಾಗಿದೆ. ಮಗುವನ್ನು ಈಗ ನಾರಾಯಣ ಹೃದಯಾಲಯಕ್ಕೆ ಸೇರಿಸಲು ವೈದ್ಯರು ಸಲಹೆ ಮಾಡಿದ್ದಾರೆ. ಆಸ್ಪತ್ರೆಯ ಖರ್ಚು ಈಗಾಗಲೇ ಎರಡು ಲಕ್ಷ ರೂಪಾಯಿ ದಾಟಿದೆ.

ಚಿಂತಾಮಣಿ ತಾಲ್ಲೂಕಿನ ಗೌನಪಲ್ಲಿಯವರಾದ ನಾನು, ನನ್ನ ಪತಿ  ಕೂಲಿ ಮಾಡಿ ಬದುಕುತ್ತಿದ್ದೇವೆ. ಇಷ್ಟು ದುಬಾರಿ ಹಣವನ್ನು ಹೊಂದಿಸಲಾಗದೆ ಪರದಾಡುತ್ತಿದ್ದೇವೆ. ಆದ್ದರಿಂದ ದಾನಿಗಳು ಉದಾರವಾಗಿ ನೆರವು ನೀಡಬೇಕೆಂದು ಮನವಿ ಮಾಡುತ್ತೇನೆ. ಚೆಕ್‌ಗಳನ್ನು ನನ್ನ ಚಿಕ್ಕಪ್ಪ ಎಲ್. ಜಾಫರ್ ಬಾಷಾ, ಎಸ್‌ಬಿ ಅಕೌಂಟ್ ನಂ. 9458, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಗೌನಪಲ್ಲಿ, ಚಿಂತಾಮಣಿ ತಾ. ಇಲ್ಲಿಗೆ ಕಳುಹಿಸಬಹುದು. ಮೊ.8123209043.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.