ಅಂದು ಕೊಟ್ಟಾಗ
ಮಂತ್ರಿ ಪದವಿ
ಹೇಳಿದರು ಶಾಸಕರು
‘ಮುಖ್ಯಮಂತ್ರಿಗಳು
ನನಗೆ
ಅಚ್ಚುಮೆಚ್ಚು’.
ಇಂದು ಹೋದಾಗ
ಮಂತ್ರಿ ಪದವಿ
ಶಾಸಕರು ಹೇಳಿದ್ದಾರೆ
‘ಮುಖ್ಯಮಂತ್ರಿಗಳಿಗೆ
ನನ್ನ ಕಂಡರೆ
ಹೊಟ್ಟೆಕಿಚ್ಚು’
ಅಂತೂ...
ಅಧಿಕಾರ ದಾಹ
ಅಟ್ಟಹಾಸದಿಂದ
ಮೆರೆದಾಗ
ರಾಜ್ಯದ ಹಿತಾಸಕ್ತಿ
ನೇಪಥ್ಯ ಸೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.