ಮಹನಗರಪಾಲಿಕೆ ಬಳಿಯ ಸುಬ್ಬಯ್ಯ ವೃತ್ತದ ಬಳಿ ಇರುವ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಿಸಿ ಸುಮಾರು ತಿಂಗಳು ಕಳೆದರೂ ಸಾರ್ವಜನಿಕರಿಗೆ ಉಪಯೋಗವಾಗಿಲ್ಲ. ಬೀಗ ಹಾಕಿರುವುದು ಇದಕ್ಕೆ ಕಾರಣ.
ಸುಬ್ಬಯ್ಯ ವೃತ್ತದಲ್ಲಿ ಈಶ್ವರ ದೇವಸ್ಥಾನವಿದೆ. ಸರ್ಕಾರಿ ಫಾರ್ಮಸಿ ಕಾಲೇಜು, ದೊಡ್ಡ ಬೇಕರಿ ಇದೆ. ಮುಚ್ಚಿರುವ ಶೌಚಾಲಯದ ಅಕ್ಕಪಕ್ಕದಲ್ಲೇ ಜನ ಮೂತ್ರವಿಸರ್ಜನೆ ಮಾಡುತ್ತಾರೆ. ಇದರಿಂದ ಈ ಪ್ರದೇಶ ದುರ್ವಾಸನೆಯಿಂದ ತುಂಬಿದೆ. ಕೂಡಲೇ ಸಂಬಂಧಪಟ್ಟವರು ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿಕೆ.
- ಜಿ.ಎಸ್. ಪ್ರಭಾಕರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.