ADVERTISEMENT

ಹಿಂದೂ ಧರ್ಮಕ್ಕೆ ಮಸಿ ಬಳಿಯುವ ಹಿಂದುತ್ವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 16:10 IST
Last Updated 1 ಫೆಬ್ರುವರಿ 2011, 16:10 IST

ನ್ಯಾಯಮೂರ್ತಿ ಸೋಮಶೇಖರ್ ಅಯೋಗವು ತನ್ನ ವರದಿಯಲ್ಲಿ ಒಂದು ಸತ್ಯಾಂಶವನ್ನು ಹೊರಗೆಡಹಿ ಮಿಕ್ಕದ್ದನ್ನು ತಿಪ್ಪೆ ಸಾರಿಸಿದೆ. ಚರ್ಚ್‌ಗಳ ಮೇಲಿನ ದಾಳಿ ‘ನಿಜವಾದ ಹಿಂದು’ ಗಳದ್ದಲ್ಲ ಎಂದಿದೆ. ಅಂದರೆ ದಾಳಿ ಮಾಡಿರುವವರು ‘ನಕಲಿ’, ‘ಢೋಂಗಿ’ ಹಿಂದೂಗಳು ಮಾಡಿರುವುದು ಎಂದರ್ಥ.

 ನಿಜ, ‘ನಿಜವಾದ ಹಿಂದೂ’ಗಳು ‘ಸರ್ವ ಧರ್ಮ ಸಮಭಾವ’ ಎಂಬ ಧ್ಯೇಯಗಳಲ್ಲಿ ನಂಬಿರುವ ಬಹುಸಂಖ್ಯಾತರು. ‘ನಕಲಿ’ ಹಿಂದೂಗಳು. ‘ಅಮಾಯಕ’ ಹಿಂದೂ ಯುವಕರುಗಳಿಗೆ ಕೋಮುದಳ್ಳುರಿ ಹಚ್ಚಿ ದಾಳಿಗೆ ಪ್ರೇರೇಪಿಸಿ ದೂರ ನಿಲ್ಲುವ ಅಲ್ಪ ಸಂಖ್ಯಾತರು. ‘ಇದು ಸಂಘ ಪರಿವಾರ’ ಪ್ರೇರಿತವಲ್ಲ ಎಂದು ಆಯೋಗ ಹೇಳಿರುವುದನ್ನು ಸಂಶಯದಿಂದ ನೋಡುವಂತಾಗಿದೆ. 

ಮಧ್ಯಪ್ರದೇಶದಲ್ಲಿ, ಪ್ರೊ. ಸಬರ್‌ವಾಲ್‌ರನ್ನು ಎಬಿವಿಪಿಯವರು ಥಳಿಸಿ ಸಾಯಿಸಿದಾಗ, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ‘ಮುಸ್ಲಿಂ ವಿರುದ್ಧ’ದ ಸಿಡಿ ಹಂಚಿದಾಗ, ವರುಣ್ ಗಾಂಧಿ ‘ಮುಸ್ಲಿಮರ ಕೈ ಕಡಿಯಿರಿ’ ಎಂದಾಗ, ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಸಾಧ್ವಿ ಪ್ರಗ್ಯಾ, ಕರ್ನಲ್ ಪುರೋಹಿತ್ ಮತ್ತಿತರರು ಭಾಗಿಯಾಗಿರುವ ಪುರಾವೆಗಳು ಸಿಕ್ಕಾಗಲೂ, ಸ್ವಾಮಿ ಅಸೀಮಾನಂದ ತನ್ನ ತಪ್ಪು ಒಪ್ಪಿಕೊಂಡಾಗಲೂ, ಬಿಜೆಪಿ ಮತ್ತು ಸಂಘ ಪರಿವಾರ ‘ಅವರು ಹಾಗೆ ಹೇಳಲೇ ಇಲ್ಲ, ಹಿಂದೂಗಳು ತಪ್ಪು ಮಾಡುವುದೇ ಇಲ್ಲ’ ಎಂದಿದ್ದರು. ನಿಜ, ‘ನಿಜವಾದ ಹಿಂದೂಗಳು’ ಎಂದೂ ಹೇಯಕೃತ್ಯ ಮಾಡುವುದಿಲ್ಲ. ‘ಹಿಂದೂ ಧರ್ಮ’ ವನ್ನು ಪಾಲಿಸುವ ಬಹುಸಂಖ್ಯಾತ ಹಿಂದೂಗಳು ಅನ್ಯ ಧರ್ಮಿಯರಿಂದಲೂ ಮೆಚ್ಚುಗೆ ಪಡೆಯುತ್ತಿರಬೇಕಾದರೆ ‘ನಿಜವಾದ ಹಿಂದೂಗಳಲ್ಲದ’ ಈ ಅಲ್ಪ ಸಂಖ್ಯಾತ ‘ನಕಲಿ ಹಿಂದೂ’ಗಳು ‘ಹಿಂದೂ ಧರ್ಮ’ಕ್ಕೆ ಕಳಂಕ ತರುವುದು ಸರಿಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.