ರಾಜ್ಯದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುವುದು ಮುಂದುವರಿದಿದೆ. 1.8 ಲಕ್ಷ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. 2011 ರಲ್ಲಿ ಲಿಂಗಾನುಪಾತ 973 ರಷ್ಟಿದ್ದರೆ ಮಕ್ಕಳ ಲಿಂಗಾನುಪಾತ 948ಕ್ಕೆ ಕುಸಿದಿದೆ. 1994ರ ಪ್ರಸವ ಪೂರ್ವ ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಿಷೇಧ ಕಾನೂನು ಸರಿಯಾಗಿ ಜಾರಿಯಾಗುತ್ತಿಲ್ಲವೆಂದೇ ಹೇಳ ಬಹುದು.
ಈಗಿರುವ ಕಾನೂನಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕು. ಲಿಂಗ ಆಯ್ಕೆಯ ವಿಚಾರದಲ್ಲಿ ಸಮಾಜದಲ್ಲಿನ ಮನಸ್ಥಿತಿಯನ್ನು ಬದಲಿಸುವ ಕಾರ್ಯ ಆಗಬೇಕು. ಈ ಕಾನೂನಿನ ಅಡಿಯಲ್ಲಿ ರಚಿಸಿದ ಜಿಲ್ಲಾ ಸಮಿತಿಗಳು ಕಾರ್ಯೋ ನ್ಮುಖವಾಗುವಂತೆ ಮಾಡಬೇಕು.
–ವಾಮನರಾವ, ತುಮಕೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.