ADVERTISEMENT

ಗೊಂದಲ ಅನಗತ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST

ಭಾರತದಂಥ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ಸಮಾಜದ ಆರ್ಥಿಕ, ಸಾಮಾಜಿಕ, ರಾಜಕೀಯ ಚೈತನ್ಯವನ್ನು ‘ಸೆಕ್ಯುಲರ್’ ಪರಿಕಲ್ಪನೆಯಲ್ಲಿಯೇ ನೋಡಬೇಕಾಗಿದೆ. ಈ ನೆಲೆಯಲ್ಲಿ ಸಹನಾಧರ್ಮ ಮತ್ತು ಸೆಕ್ಯುಲರ್‌ವಾದ ಆಪ್ತವಾಗಿರುವಂಥವು. ಇದನ್ನು ಸೈದ್ಧಾಂತಿಕ ವಾಗ್ವಾದದ ಮೂಲಕ ಗೊಂದಲಗೊಳಿಸಬೇಕಾಗಿಲ್ಲ.

ನಮ್ಮೆಲ್ಲ ಹಿರಿಯ ಚಿಂತಕರು ಮತ್ತು ಸಂತ ಮಹನೀಯರು ಸರಳ ಮಾತುಗಳಲ್ಲಿ ಹೇಳಿಹೋಗಿದ್ದಾರೆ. ಇಷ್ಟಾದರೂ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಬಿ.ಶೆಟ್ಟಿ ಅವರ ಹಾಗೂ ದೇವನೂರ ಮಹಾದೇವ ಅವರ ಹೇಳಿಕೆಯನ್ನು ಅಭಿಮಾನದಿಂದ ಒಪ್ಪುತ್ತೇನೆ.

–ಶೂದ್ರ ಶ್ರೀನಿವಾಸ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.