ADVERTISEMENT

ರಜೆ ಘೋಷಿಸಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಮಾರ್ಚ್ 2020, 17:54 IST
Last Updated 20 ಮಾರ್ಚ್ 2020, 17:54 IST

ಕೊರೊನಾ ವೈರಸ್ ಪರಿಣಾಮವಾಗಿ ತುರ್ತು ಪ್ರಕರಣಗಳ ಹೊರತಾಗಿ ಕಕ್ಷಿದಾರರು ಮತ್ತು ವಕೀಲರು ಕಲಾಪದಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್‌ ಪ್ರಕಟಣೆ ಹೊರಡಿಸಿದೆ. ಆದರೂ ಅಧೀನ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ಕಾರಣ, ಕೆಲವು ಕಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ, ಮುಂದಿನ ತಿಂಗಳು ಇರುವ ಬೇಸಿಗೆ ರಜೆಯನ್ನು ಮುಂಚಿತವಾಗಿಯೇ ನೀಡಿ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ರಜೆ‌ ದಿನಗಳಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಿದರೆ, ವೈರಾಣು ಹರಡದಂತೆ ತಡೆಯಲು ಅನುಕೂಲವಾಗುತ್ತದೆ.

ತುರ್ತು ಪ್ರಕರಣಗಳಿಗೆ‌ ಸಂಬಂಧಿಸಿದಂತೆ ರಜಾ ಕಾಲದ ನ್ಯಾಯಾಲಯಗಳಿಗೇ ಅಧಿಕಾರ ನೀಡಿದರೆ ವ್ಯವಸ್ಥೆಗೆ ಯಾವುದೇ ತೊಂದರೆಯಾಗದು. ಕ್ರಿಮಿನಲ್ ಪ್ರಕರಣಗಳಲ್ಲಿಯೂ ಸಾಕ್ಷಿಯ ವಿಚಾರಣೆ ನಿಲ್ಲಿಸಿ, ಕೇವಲ ಜಾಮೀನು ಮನವಿಗಳ ವಿಚಾರಣೆಯನ್ನು ನಡೆಸಲು ಆದೇಶಿಸಿದರೆ ಉತ್ತಮ.

ಎಸ್.ರವಿ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.