ADVERTISEMENT

ವಾಚಕರ ವಾಣಿ | ಪರೀಕ್ಷೆ ರದ್ದು: ಸರ್ಕಾರಿ ಉದ್ಯೋಗಕ್ಕೆ ಕುತ್ತಾಗದಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST

ರಾಜ್ಯ ಸರ್ಕಾರವು ಪಿಯು ಪರೀಕ್ಷೆಗಳನ್ನು ರದ್ದುಪಡಿಸಿರುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಹೆಚ್ಚಿನ ಫಲಿತಾಂಶ ಪಡೆಯಬೇಕೆಂಬ ಉದ್ದೇಶದಿಂದ ಹಗಲು, ರಾತ್ರಿ ಎನ್ನದೇ ಓದಿರುವ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಪಿಯು ನಂತರದ ವೃತ್ತಿಪರ ತರಗತಿಗಳ ಆಯ್ಕೆಗೆ ನಡೆಸುವ ಸಿಇಟಿ ಪರೀಕ್ಷೆಗೆ ಪಿಯು ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಪಿಯು ಪರೀಕ್ಷೆಗಿಂತ ಸಿಇಟಿ ಪರೀಕ್ಷೆ ಕ್ಲಿಷ್ಟಕರವಾಗಿರುವುದರಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸುವುದು ಕಷ್ಟವಾಗಲಿದೆ.

ಈ ವರ್ಷ ಶ್ರೇಣಿ ಆಧಾರಿತ ಫಲಿತಾಂಶ ನೀಡುವ ಸರ್ಕಾರದ ನಿರ್ಧಾರವು ಆಕಾಂಕ್ಷಿಗಳಿಗೆ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಮ ಲೆಕ್ಕಾಧಿಕಾರಿಯಂತಹ ಕೆಲವು ಹುದ್ದೆಗಳಿಗೆ ದ್ವಿತೀಯ ಪಿಯು ಕನಿಷ್ಠ ವಿದ್ಯಾರ್ಹತೆಯ ಮೂಲಕ ನೇರ ನೇಮಕಾತಿ ನಡೆಯುತ್ತದೆ. ಹೀಗಾಗಿ ಗ್ರೇಡಿಂಗ್‌ನೊಂದಿಗೆ ಅಂಕಗಳನ್ನು ಸಹ ನಮೂದು ಮಾಡುವ ವ್ಯವಸ್ಥೆ ಮಾಡಬೇಕು. ಈ ಮೂಲಕ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಕೈತಪ್ಪುವ ಸಾಧ್ಯತೆಯನ್ನು ಹೋಗಲಾಡಿಸಬೇಕು.

–ರಾಕೇಶ ಆಲಬಾಳ, ಅಥಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.