ADVERTISEMENT

ಅನುಕಂಪ ತೋರಿದರಷ್ಟೇ ಸಾಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಫೆಬ್ರುವರಿ 2019, 20:15 IST
Last Updated 27 ಫೆಬ್ರುವರಿ 2019, 20:15 IST

ಸಂವಿಧಾನದಲ್ಲಿ ಅಳವಡಿಕೆಯಾಗಿರುವ ಮೂಲಭೂತ ಕರ್ತವ್ಯಗಳಲ್ಲಿನ ಒಂದು ಕರ್ತವ್ಯ ಹೀಗಿದೆ: ‘ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು, ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು’. ಆದರೆ, ಇದು ಪ್ರಜೆಗಳು, ಪ್ರಭುಗಳು ಮತ್ತು ಅಧಿಕಾರಶಾಹಿಗೆ ಅರ್ಥವಾದಂತೆ ತೋರುತ್ತಿಲ್ಲ.

ಒಂದು ವಾರ ಕಾಡು ಬೆಂದ ನಂತರ ಅದರಿಂದಾದ ಅನಾಹುತದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಮರುಗದವರಿಲ್ಲ. ಈ ರೀತಿ ಅನುಕಂಪ ತೋರಿದರಷ್ಟೇ ಸಾಕೆ? ಇದು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆ. ಅಗತ್ಯವಿರುವಷ್ಟು ಅರಣ್ಯ ವೀಕ್ಷಕರು ಮತ್ತು ಅಧಿಕಾರಿಗಳನ್ನು ನೇಮಿಸದ ಸರ್ಕಾರ, ಬೇಜವಾಬ್ದಾರಿ ತೋರಿದ ಅಧಿಕಾರಿಗಳು, ಅಜಾಗೃತ ಪ್ರಜೆಗಳು ಇರುವವರೆಗೂ ಇಂತಹ ಅಪಾಯ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT