ADVERTISEMENT

ಸಿನಿಮಾ ಮಂದಿರವಲ್ಲ, ಕಲಾಕೇಂದ್ರ

ಲೋಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 20:00 IST
Last Updated 3 ಫೆಬ್ರುವರಿ 2019, 20:00 IST

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಜಾನಪದ ಲೋಕ, ಎಚ್.ಎಲ್. ನಾಗೇಗೌಡರ ಕನಸಿನ ಕೂಸು. ಜಾನಪದ ಕಲೆಗಳ ಪರಿಚಯ, ಅವುಗಳ ಮಂಥನ, ವಸ್ತುಸಂಗ್ರಹಾಲಯದ ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ಸಂಪತ್ತಿನ ಜನಪದ ಕಲಾವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ, ಪ್ರದರ್ಶಿಸುವ ಉದ್ದೇಶದಿಂದ ಅದನ್ನು ಸ್ಥಾಪಿಸಲಾಗಿದೆ.

ಕನ್ನಡ– ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಜಾನಪದ ಲೋಕದ ಪ್ರವೇಶ ಶುಲ್ಕವನ್ನು ಮನರಂಜನೆ ನೀಡುವ ಸಿನಿಮಾ ಥಿಯೇಟರ್‌ಗಳಲ್ಲಿ ಏರಿಸುವಂತೆ ಏರಿಕೆ ಮಾಡಲಾಗಿದೆ. ಇದು ಸರಿಯಲ್ಲ. ಶುಲ್ಕ ದರವನ್ನು ಕಡಿಮೆ ಮಾಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟು, ಈ ಕಲಾಕೇಂದ್ರವನ್ನು ಉಳಿಸಲಿ, ಬೆಳೆಸಲಿ.

-ಚಿಕ್ಕಜೋಗಿಹಳ್ಳಿ ನಾಗರಾಜ್, ಹೊನ್ನಾಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.