ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು: ಇವರೂ ಜನರಿಂದ ಆಯ್ಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:52 IST
Last Updated 23 ಡಿಸೆಂಬರ್ 2018, 19:52 IST

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು, ಶತಮಾನವನ್ನು ಪೂರೈಸಿ ಮುಂದುವರಿದಿರುವುದು ಹೆಮ್ಮೆಯ ವಿಚಾರ. ಇಂಥ ಸಂದರ್ಭದಲ್ಲಿ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷವೋ ಅಥವಾ ಐದು ವರ್ಷವೋ ಎನ್ನುವ ಜಿಜ್ಞಾಸೆಯನ್ನು ನ್ಯಾಯಾಲಯದ ತನಕ ತಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಪರಿಷತ್ತಿನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ಮಾಡಬೇಕು ಎಂದೆನಿಸುತ್ತದೆ. ಗೌರವ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರು ಸಹ ಚುನಾವಣೆ ಎದುರಿಸಿ, ಗೆದ್ದು ಬಂದು ಆ ಸ್ಥಾನ ಪಡೆದರೆ ಪರಿಷತ್ತಿನ ಆಡಳಿತ ಹೆಚ್ಚು ಅರ್ಥಪೂರ್ಣವಾಗುತ್ತದೆ. ಸಂಬಂಧಿಸಿದವರು ಈ ಬದಲಾವಣೆಗೆ ಮುಂದಾಗಬೇಕು.

-ಕೆ.ವಿ. ಶ್ರೀನಿವಾಸ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.