ADVERTISEMENT

ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿತ್ತೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಜನವರಿ 2022, 19:30 IST
Last Updated 4 ಜನವರಿ 2022, 19:30 IST

ಜನಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ ಅದು ತೋಳೇರಿಸಿ ಗುದ್ದಾಟಕ್ಕೆ ಇಳಿಯುವ ಮಟ್ಟಕ್ಕೆ ಹೋಗಬಾರದು. ರಾಮನಗರದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದ ಸಮಾರಂಭದಲ್ಲಿ ಸಚಿವ ಡಾ. ಅಶ್ವತ್ಥನಾರಾಯಣ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರು ಸಾರ್ವಜನಿಕರ ಸಮ್ಮುಖದಲ್ಲಿ ಪರಸ್ಪರ ವಾಕ್ಸಮರಕ್ಕೆ ಇಳಿದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದು ದುರುದೃಷ್ಟಕರ.

ಜನಪ್ರತಿನಿಧಿಗಳಾದವರು ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಸಹನೆ, ತಾಳ್ಮೆ, ಸಭ್ಯತೆಯಿಂದ ವರ್ತಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರ ಸಮ್ಮುಖದಲ್ಲಿ ಅಪಹಾಸ್ಯಕ್ಕೆ ಈಡಾಗಿ, ಅವರ ನಾಯಕತ್ವ ಗುಣದ ಮತ್ತೊಂದು ಮುಖ ಸಭಿಕರಿಗೆ ಪರಿಚಯವಾಗುವ ಮೂಲಕ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಯಾವುದೇ ಪಕ್ಷದ ಸಚಿವರಾಗಿರಲಿ, ಮುಖ್ಯಮಂತ್ರಿಯಾಗಿರಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸರ್ಕಾರದ ಹಣದಿಂದಲೇ ವಿನಾ ರಾಜಕಾರಣಿಗಳ ಸ್ವಂತ ಹಣದಿಂದ ಅಲ್ಲ. ಕಾರ್ಯಕ್ರಮದಲ್ಲಿ ವಿಷಯವನ್ನು ಅಷ್ಟೊಂದು ವೈಯಕ್ತಿಕ ಪ್ರತಿಷ್ಠೆಯಂತೆ ತೆಗೆದುಕೊಂಡು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡು ಸಭಿಕರಿಗೆ ಮನರಂಜನೆ ಒದಗಿಸುವ ಅವಶ್ಯಕತೆ ಇರಲಿಲ್ಲ.

- ವಿ.ಜಿ.ಇನಾಮದಾರ,ಸಾರವಾಡ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.