ADVERTISEMENT

ನೋಡುವ ದೃಷ್ಟಿ ಮುಖ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 19:45 IST
Last Updated 16 ಮಾರ್ಚ್ 2020, 19:45 IST

‘ಬಹುಮತಾಧಿಕಾರವು ಸರ್ವಾಧಿಕಾರವಲ್ಲ’ ಎಂಬ ಬರಗೂರು ರಾಮಚಂದ್ರಪ್ಪನವರ ವಿಶ್ಲೇಷಣೆ
(ಪ್ರ.ವಾ., ಮಾರ್ಚ್ 14) ಓದಿದಾಗ ಕಿವಿ ಮತ್ತು ಕಣ್ಣುಗಳೊಂದಿಗೆ ನೋಡುವ ಮನಸ್ಸೂ ಮುಖ್ಯ ಅನ್ನಿಸಿತು. ಅವರು ಉಲ್ಲೇಖಿಸಿರುವ ಯಾವುದೇ ಘಟನೆಯಲ್ಲಿ ಪ್ರತಿಭಟಿಸಿದ ವ್ಯಕ್ತಿಗಳ ಪ್ರಭಾವದಿಂದ ಮಸೂದೆಗಳನ್ನು ಹಿಂತೆಗೆದುಕೊಂಡಿದ್ದಲ್ಲ. ಬದಲಾಗಿ, ವಿಷಯಾಧಾರಿತ ವಿರೋಧವೇ ಪ್ರಮುಖವಾಗಿದೆ.

ಪ್ರಸ್ತುತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸುತ್ತಿರುವುದರಲ್ಲಿ ವಿಷಯವೇ ದುರ್ಬಲವಾಗಿದೆ ಎಂಬುದಕ್ಕೆ ಕಾಂಗ್ರೆಸ್‍ನ ಮುಂದಾಳು ಕಪಿಲ್ ಸಿಬಲ್ ಅವರ ಹೇಳಿಕೆಯೇ ಸಾಕ್ಷಿ. ಸಿಎಎಯಿಂದ ಯಾರ ನಾಗರಿಕತ್ವವನ್ನೂ ಕಸಿದುಕೊಳ್ಳಲಾಗದು ಎಂದು ಅವರು ಸಂಸತ್ತಿನಲ್ಲೇ ಹೇಳಿದ್ದಾರೆ. ಹಾಗಾಗಿ, ಅದೇ ಲೇಖನದಲ್ಲಿ ಪ್ರಸ್ತಾಪವಾಗಿರುವ ನೆಹರೂ ಅವರ ಮಾತನ್ನು ಬಳಸಿಕೊಂಡು ‘ಮುಸ್ಲಿಮ್ಸ್ ಆರ್ ಇಂಪಾರ್ಟೆಂಟ್, ಬಟ್ ಇಂಡಿಯಾ ಈಸ್ ಮೋರ್ ಇಂಪಾರ್ಟೆಂಟ್’ ಎಂಬುದನ್ನು ಅರ್ಥಮಾಡಿಕೊಳ್ಳ
ಬೇಕು. ಕೇವಲ ಮುಸ್ಲಿಮರ ನಾಗರಿಕತ್ವ ಅಪಾಯದಲ್ಲಿದೆ ಎಂದು ಹುಯಿಲೆಬ್ಬಿಸಿದವರ ಗಲಭೆಗೆ ಹೆದರಿ, ದೇಶದ ಭದ್ರತೆಯನ್ನೇ ಬಲಿ ಕೊಡುವುದರಲ್ಲಿ ಏನರ್ಥವಿದೆ? ಆದ್ದರಿಂದ ಬರಗೂರು ಅವರು ನೋಡುವ ದೃಷ್ಟಿಯನ್ನು ಬದಲಿಸಿಕೊಂಡರೆ ವಾಸ್ತವ ಸ್ಪಷ್ಟವಾಗುತ್ತದೆ.

ಚಂದ್ರಶೇಖರ ದಾಮ್ಲೆ,ಸುಳ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.