ADVERTISEMENT

ವಾಚಕರ ವಾಣಿ| ಎದುರಾಳಿಗಳ ಹಣಿಯಲು ಸೀಜರ್‌ ಮಾದರಿ!

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 19:30 IST
Last Updated 23 ಜನವರಿ 2023, 19:30 IST

ಷೇಕ್ಸ್‌ಪಿಯರ್‌ನ ಅತ್ಯಂತ ಜನಪ್ರಿಯ ನಾಟಕ ‘ಜೂಲಿಯಸ್ ಸೀಜರ್’. ಸೀಜರ್ ಜನಪ್ರಿಯ ರಾಜ. ಅವನ ಹಿತಶತ್ರುಗಳು ಸಭೆಯಲ್ಲಿಯೇ ಅವನನ್ನು ಕೊಲ್ಲುತ್ತಾರೆ. ಆ ಗುಂಪಿನಲ್ಲಿ ಸೀಜರ್‌ನ ಪರಮಮಿತ್ರನಾಗಿದ್ದ ಬ್ರೂಟಸ್ ಕೂಡ ಒಬ್ಬ. ಸೀಜರ್‌ನ ಇನ್ನೊಬ್ಬ ಆಪ್ತ ಆಂಟೊನಿ ಈ ದುಷ್ಟಕೂಟದ ಕುತಂತ್ರವನ್ನು ಬಯಲು ಮಾಡಲು ನಿಶ್ಚಯಿಸಿ, ಆ ದುಷ್ಟಕೂಟವು ಸಾಮ್ರಾಜ್ಯ ಪಡೆದ ಸಂಭ್ರಮವನ್ನು ಆಚರಿಸುತ್ತಿರುವಾಗ, ಅವರನ್ನು ಹೊಗಳತೊಡಗುತ್ತಾನೆ. ಸೀಸರ್ ಹತ್ಯೆಯಾದದ್ದು ಒಳ್ಳೆಯದಾಯಿತು ಎನ್ನುವಂತಹ ಜಾಣತನದ ಮಾತನಾಡಿ, ದುಷ್ಟಕೂಟದ ಕುತಂತ್ರವನ್ನು ಬಯಲು ಮಾಡುತ್ತಾನೆ. ಕಡೆಗೆ ಜನರೇ ಆ ದುಷ್ಟಕೂಟವನ್ನು ಓಡಿಸುತ್ತಾರೆ. ಈ ಸಂದರ್ಭದಲ್ಲಿನ ಆಂಟೊನಿ ಭಾಷಣ ಜಗತ್‍ಪ್ರಸಿದ್ಧವಾಗಿದೆ.

ಎದುರಾಳಿಗಳನ್ನು ಮಟ್ಟಹಾಕಲು ನಾಯಕರು ತಾವೇ ಎದೆ ತಟ್ಟಿಕೊಂಡು ಕೂಗಾಡಿ ಅವರನ್ನು ಹೀಯಾಳಿಸುವುದು ಅಪ್ರಬುದ್ಧತೆ ಅಲ್ಲವೇ? ಗಂಭೀರವಾಗಿ ಹೊಗಳುವಂತೆ ಟೀಕಿಸಿ ಜನರು ತಾವೇ ಎದೆ ತಟ್ಟಿ ಎದುರಾಳಿಗಳನ್ನು ಓಡಿಸಬೇಕು. ಇಂತಹ ಶೈಲಿಯನ್ನು ರೂಢಿಸಿಕೊಳ್ಳದ ರಾಜಕೀಯ ಧುರೀಣರು ಸ್ವತಃ ಅಪಹಾಸ್ಯಕ್ಕೆ ಈಡಾಗುತ್ತಿರುವುದು ಅಚ್ಚರಿಯ ಸಂಗತಿ.

– ಸತ್ಯಬೋಧ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.