ADVERTISEMENT

ಸ್ಟೆಪ್ನಿಯಲ್ಲಿ ಹಣ: ಮರ್ಮ ತಿಳಿದಿದೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:30 IST
Last Updated 26 ಏಪ್ರಿಲ್ 2019, 20:30 IST

ಬೆಂಗಳೂರಿನಿಂದ ಇತ್ತೀಚೆಗೆ ಕಾರಿನ ಸ್ಟೆಪ್ನಿಯಲ್ಲಿ ಸಾಗಿಸುತ್ತಿದ್ದ ₹2.3 ಕೋಟಿ ಹಣಭದ್ರಾವತಿಯ ಜೆಡಿಎಸ್‌ ಮುಖಂಡ ಎಂ.ಜೆ.ಅಪ್ಪಾಜಿಗೌಡರಿಗೆ ಸೇರಿದ್ದು ಎಂಬ ಅಭಿಪ್ರಾಯಕ್ಕೆ ಐ.ಟಿ ಅಧಿಕಾರಿಗಳು ಬಂದಿದ್ದಾರೆ (ಪ್ರ.ವಾ., ಏ.23).

ಅದು ನಿವೇಶನ ಮಾರಿದ್ದರಿಂದ ಬಂದ ಹಣ ಎಂಬ ಅಪ್ಪಾಜಿಗೌಡರ ಹೇಳಿಕೆ ಹಾಸ್ಯಾಸ್ಪದ ಎನಿಸುತ್ತದೆ. ಈಗಿನ ಆನ್‌ಲೈನ್ ಯುಗದಲ್ಲಿ ಕೋಟಿಗಟ್ಟಲೆ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವುದು ಎಷ್ಟು ಸರಿ? ಅದೂ ಚುನಾವಣಾ ಸಮಯದಲ್ಲಿ. ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಬೇಕಾದ ಹಣವನ್ನು ಕಾರಿನ ಸ್ಟೆಪ್ನಿಯಲ್ಲಿ ಸಾಗಿಸಿದ್ದೇಕೆ ಎಂಬುದರ ಹಿನ್ನೆಲೆ ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವಿಚಾರ ತಿಳಿದಾಕ್ಷಣ ಚುರುಕಿನ ಕಾರ್ಯಾಚರಣೆ ನಡೆಸಿದ ಐ.ಟಿ. ಅಧಿಕಾರಿಗಳ ಕಾರ್ಯ ಪ್ರಶಂಸನೀಯ.

– ಎಸ್‌.ನಾಗರಾಜನಾಗೂರ,ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.