ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಇನ್ನು ಮುಂದೆ ಪ್ರಯಾಣಿಕರಿಗೆ ಮಣ್ಣಿನ ಕುಡಿಕೆಗಳಲ್ಲಿ ಚಹಾ ನೀಡುವ ಪದ್ಧತಿ ಜಾರಿಗೆ ತರಲು ರೈಲ್ವೆ ಇಲಾಖೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ. ಚಹಾ ಅಥವಾ ಕಾಫಿಗಾಗಿ ಪ್ಲಾಸ್ಟಿಕ್ ಕಪ್ ಬಳಕೆ ಮಾಡುವುದರಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿತ್ತು. ಈಗಿನ ನಿರ್ಧಾರವು ಗುಡಿ ಕೈಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸಮುದಾಯಗಳಿಗೆ ಆಸರೆ ನೀಡುತ್ತದೆ. ಹೀಗಾಗಿ, ಇದೊಂದು ಔಚಿತ್ಯಪೂರ್ಣವಾದ ತೀರ್ಮಾನ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಡಕೆ ತಯಾರಿಕೆಯ ಕೌಶಲ ತರಬೇತಿ ಕಾರ್ಯಕ್ರಮ ರೂಪಿಸಿ ಮುಂದಿನ ಪೀಳಿಗೆಗೆ ಕುಂಬಾರಿಕೆಯನ್ನು ಪರಿಚಯಿಸಬೇಕು. ಈ ಮೂಲಕ ಉದ್ಯೋಗ ಸೃಷ್ಟಿ ಸಾಧ್ಯ. ಜೊತೆಗೆ, ಕುಲಕಸುಬನ್ನೇ ನಂಬಿರುವ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಲಿ.
-ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.