ADVERTISEMENT

ಅರ್ಹರಿಗೆ ಬೇಕು ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ ಕಾಲೇಜುಗಳಿಗೆ ಶೇ 50ರಷ್ಟು ಅತಿಥಿ ಉಪನ್ಯಾಸಕರನ್ನಷ್ಟೇ ಆಯ್ಕೆ ಮಾಡಿರುವುದನ್ನು ತಿಳಿದು ಬೇಸರವಾಯಿತು. ನಾನು 2019ರಲ್ಲಿ ಯುಜಿಸಿ, ನೆಟ್‌ ತೇರ್ಗಡೆ ಹೊಂದಿದ್ದು, ಅವಕಾಶಕ್ಕಾಗಿ ಎದುರು ನೋಡುತ್ತಿದ್ದೆ. ಕೋವಿಡ್‌ನಿಂದಾಗಿ ಕಾಲೇಜುಗಳನ್ನು ಮುಚ್ಚಲಾಗಿತ್ತು. ಆದರೆ ಈಗ ಜನಜೀವನ ಮತ್ತೆ ಮೊದಲಿನ ಸ್ಥಿತಿಗೆ ಬಂದಿದೆ.

2015ರಿಂದ ನಡೆಯದೇ ಇದ್ದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆ ನಡೆಸಲೂ ಸರ್ಕಾರ ಹಿಂದೇಟು ಹಾಕುತ್ತಿದೆ. ಅಧ್ಯಾಪಕರ ಅವಶ್ಯಕತೆಯಿದ್ದಾಗ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟು ಕಲಿಕೆಯನ್ನು ಸುಗಮವಾಗಿಸುವುದು ಸರ್ಕಾರದ ಆದ್ಯತೆಯಾಗಿರಬೇಕಲ್ಲವೇ? ಯುವಜನರು ಸಮಾಜದಲ್ಲಿ ಗೌರವದಿಂದ ಬಾಳುವ ಅವಕಾಶಗಳನ್ನು ಕಸಿಯುವಂತಹ ಕೆಲಸ ಆಗಬಾರದು.

ನಂದನ್‌,ಸುಳ್ಯಪದವು, ಪುತ್ತೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.