ADVERTISEMENT

ಫೋನ್ ಕದ್ದಾಲಿಕೆ: ನಾಚಿಕೆಗೇಡಿನ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 16:46 IST
Last Updated 3 ಆಗಸ್ಟ್ 2021, 16:46 IST

ಸರ್ಕಾರವು ವಿರೋಧ ಪಕ್ಷಗಳ ಮುಖಂಡರು ಮತ್ತು ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 1996ರಲ್ಲಿ ತನಿಖೆಗೆ ಆಗ್ರಹಿಸಿದ್ದರು (ಪ್ರ.ವಾ., 25 ವರ್ಷಗಳ ಹಿಂದೆ, ಆ. 3). ಸ್ವತಃ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಎಚ್‌.ಡಿ.ದೇವೇಗೌಡರ ಫೋನ್ ಕದ್ದಾಲಿಕೆ ಮಾಡಿದ ಆರೋಪಕ್ಕೊಳಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಮಾಜವು ದೇಶದ್ರೋಹಿಗಳನ್ನು ಸದೆಬಡಿಯಲು ಗೂಢಚಾರಕ್ಕೆ ಬಳಸಬೇಕಾದ ಫೋನ್ ಕದ್ದಾಲಿಕೆಯು ಸರ್ಕಾರಗಳು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು
ಅಸ್ತ್ರವಾಗುತ್ತಿರುವುದು ನಾಚಿಕೆಗೇಡು.

-ಡಾ. ಎಚ್.ಆರ್.ಪ್ರಕಾಶ್,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT