ADVERTISEMENT

ರಾಷ್ಟ್ರಪತಿ ಹುದ್ದೆಯ ಅಗತ್ಯ: ಚಿಂತನೆಗೆ ಸಕಾಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಸೆಪ್ಟೆಂಬರ್ 2022, 19:30 IST
Last Updated 12 ಸೆಪ್ಟೆಂಬರ್ 2022, 19:30 IST

ರಾಣಿ ಎಲಿಜಬೆತ್ ಮರಣದ ಪ್ರಯುಕ್ತ ಭಾರತದಲ್ಲೂ ಸರ್ಕಾರಿ ಶೋಕ ಆಚರಿಸಲಾಯಿತು. ಅಲ್ಲಿ ರಾಜವಂಶ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ನಡುವಣ ಸಂಬಂಧ ಹೀಗೆಯೇ ಮುಂದುವರಿಯಬೇಕೆ ಎಂಬ ಚರ್ಚೆ ಒಂದು ವಾರದ ನಂತರ ಆರಂಭವಾಗಬಹುದು. ಇಲ್ಲಿಯೂ ಅಂತಹ ವಿಷಯವೊಂದಿದೆ. ಕಾಮನ್‌ವೆಲ್ತ್ ದೇಶಗಳಲ್ಲೊಂದಾದ ಭಾರತದಲ್ಲಿ ಪ್ರಧಾನಿಯನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಬ್ರಿಟನ್ನಿನ ರಾಣಿ ನಿರ್ವಹಿಸಿದ ಕೊನೆಯ ಮುಖ್ಯ ಕರ್ತವ್ಯವೂ ಹೊಸ ಪ್ರಧಾನಿಯನ್ನು ನೇಮಿಸಿದ್ದು.

ರಾಜಪ್ರಭುತ್ವವನ್ನು ಉಳಿಸಿಕೊಂಡು ಹೋಗಲು ವಾರ್ಷಿಕವಾಗಿ ಎಷ್ಟು ಖರ್ಚು ತಗಲುತ್ತದೆ ಎಂಬ ಅಂದಾಜುಗಳು ಹೊರಬರುತ್ತಿವೆ. ವೇತನಕ್ಕೆ ಗ್ರಾಂಟ್, ಖಾಸಗಿ ಖರ್ಚುಗಳಿಗಾಗಿ ಪ್ರೈವಿ ಪರ್ಸ್ ಇತ್ಯಾದಿ ನೀಡಲಾಗುತ್ತಿದೆ. ಭಾರತದಲ್ಲಿನ ರಾಷ್ಟ್ರಪತಿ ಹುದ್ದೆ ಕೆಲಮಟ್ಟಿಗೆ ಬ್ರಿಟನ್ನಿನ ರಾಜ, ರಾಣಿಯ ಪದಗಳನ್ನು ಹೋಲುತ್ತದೆ. ಆನುವಂಶಿಕ ಅಲ್ಲ ಹಾಗೂ ಸಂಪತ್ತು, ಆದಾಯದ ಮೂಲಗಳಿಲ್ಲ ಎಂಬುದು ಪ್ರಮುಖ ವ್ಯತ್ಯಾಸ. ಇಲ್ಲಿನ ಉಪರಾಷ್ಟ್ರಪತಿಗೆ ರಾಜ್ಯಸಭೆಯನ್ನು ನಡೆಸುವ ಜವಾಬ್ದಾರಿಯಾದರೂ ಇರುತ್ತದೆ, ಆದರೆ ರಾಷ್ಟ್ರಪತಿಗೆ ಕಾಲಬದ್ಧ ಕೆಲಸವೇ ಇಲ್ಲ. ಬಹುಪಾಲು ಆಲಂಕಾರಿಕವಾದ ಈ ಹುದ್ದೆಗೆ ಗಮನಾರ್ಹ ಮೊತ್ತ ವ್ಯಯವಾಗುತ್ತಿದೆ. ‘ರಾಜ’ ಪದವನ್ನು ತೆಗೆಯಬೇಕು ಎನ್ನುವವರು ಇತ್ತಲೂ ಗಮನಹರಿಸಲಿ.

ರಾಷ್ಟ್ರಪತಿಯ ಆಯ್ಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿಯ ಪಾತ್ರ ಮುಖ್ಯವಾಗಿರುವುದು ಹಾಗೂ ಕಾರ್ಯಶೈಲಿಯಲ್ಲಿ ಅಧ್ಯಕ್ಷೀಯತೆ ಕಾಣುತ್ತಿರುವುದು ಗೊತ್ತಿರುವ ಸಂಗತಿಯೇ. ಯು.ಕೆ. ನೈಜ ರಿಪಬ್ಲಿಕ್ ಆಗಿ ಇದ್ದುದು ಹನ್ನೊಂದು ವರ್ಷ ಮಾತ್ರ (ಕ್ರಿ.ಶ. 1649ರಿಂದ 1660). ಭಾರತ 1950ರಿಂದ ರಿಪಬ್ಲಿಕ್ ಆಗಿದೆ. ಈಗ ಬದಲಾವಣೆಗಳ ಬಗೆಗೆ ನಿರ್ಧರಿಸಲು ಸಕಾಲ.

ADVERTISEMENT

- ಎಚ್.ಎಸ್.ಮಂಜುನಾಥ,ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.