ADVERTISEMENT

ಅತ್ಯುತ್ತಮ ರಬ್ಬರ್ ಸ್ಟ್ಯಾಂ‍ಪ್‌ ಜನಕರು!

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 20:15 IST
Last Updated 26 ಜೂನ್ 2022, 20:15 IST

ರಾಷ್ಟ್ರಪತಿ ಸ್ಥಾನದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಅವರು ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಬುಡಕಟ್ಟು ಜನರ ಪ್ರತಿನಿಧಿ ಎಂದು ಜನಮೆಚ್ಚುಗೆಗಾಗಿ ಹಾಗೂ ತಾನು ಬಲಹೀನರ ಪ್ರತಿನಿಧಿ ಎಂದು ತೋರಿಸಿಕೊಳ್ಳಲು ಬಿಜೆಪಿ ಈ ಆಯ್ಕೆ ಮಾಡಿದೆ. ಯಶವಂತ ಸಿನ್ಹಾ ಅವರಂತಹ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡವರಾದರೆ ಸರ್ಕಾರದ ನಿರ್ಧಾರಗಳನ್ನು ಮರುಪರಿಶೀಲನೆಗೆ ಒಳಪಡಿಸಿ ಮಸೂದೆಗಳನ್ನು ಹಿಂದಿರುಗಿಸುತ್ತಾರೆ. ಇದರಿಂದಾಗಿ ಯಾವುದೇ ಮಸೂದೆಯನ್ನು ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಲು ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ.

ಬಹುಮತ ಹೊಂದಿರುವ ಈಗಿನ ಸರ್ಕಾರದ ಈಗಿನ ರಾಷ್ಟ್ರಪತಿ ಕೂಡ ಬಿಜೆಪಿಯವರ ಆಯ್ಕೆಯಾಗಿದ್ದು, ಯಾವುದೇ ಪ್ರತಿರೋಧ ತೋರದಂತೆ ಪಕ್ಷದ ಕಟ್ಟುಪಾಡಿಗೆ ಒಳಪಟ್ಟವರಾಗಿದ್ದಾರೆ. ಮುಂದಿನ ರಾಷ್ಟ್ರಪತಿ ಕೂಡ ಇದೇ ನಿಯಮಕ್ಕೆ ಒಳಪಡುವವರಾಗಿರಬಹುದು. ರಾಷ್ಟ್ರಪತಿಯನ್ನು ಕಾಂಗ್ರೆಸ್‌ನ ರಬ್ಬರ್ ಸ್ಟ್ಯಾಂಪ್ ಎಂದು ಅಣಕಿಸುತ್ತಿದ್ದವರೇ ಈಗ ಅತ್ಯುತ್ತಮ ರಬ್ಬರ್ ಸ್ಟ್ಯಾಂ‍ಪ್‌ನ ಜನಕರಾಗಿದ್ದಾರೆ!

-ಮುಳ್ಳೂರು ಪ್ರಕಾಶ್,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.