ADVERTISEMENT

ಆವೇಶದಿಂದ ಮೂಲ ಆಶಯ ಮರೆಯಾಗದೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಏಪ್ರಿಲ್ 2022, 19:31 IST
Last Updated 7 ಏಪ್ರಿಲ್ 2022, 19:31 IST

‘ವಿಧಾನಸೌಧಕ್ಕೆ ಬೆಂಕಿ ಹಚ್ಚಿ’ ಎಂಬ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಆವೇಶಭರಿತ ಹೇಳಿಕೆ (ಪ್ರ.ವಾ., ಏ. 7) ಒಪ್ಪುವಂಥದ್ದಲ್ಲ. ಸರ್ಕಾರದ ನಡೆಯನ್ನು ಪ್ರಶ್ನಿಸುವ ಅವಸರದಲ್ಲಿ ಆವೇಶಭರಿತ ಮಾತುಗಳಿಂದ ಮೂಲ ಉದ್ದೇಶಗಳು ಮರೆಯಾಗಿ, ಇದರಿಂದ ಅನಗತ್ಯ ಚರ್ಚೆಗೆ ಅವಕಾಶ ಸೃಷ್ಟಿಯಾಗುವುದಿಲ್ಲವೇ? ಸರ್ಕಾರ ಜನಪರ
ವಾಗಿಲ್ಲ ಎಂದು ಅನಿಸಿದರೆ ವಿರೋಧ ಪಕ್ಷಗಳು ಟೀಕಿಸುವುದು, ಅದಕ್ಕೆ ಆಡಳಿತ ಪಕ್ಷ ನೀಡುವ ಪ್ರತ್ಯುತ್ತರಗಳು ಸಮಾಜದಲ್ಲಿ ಆರೋಗ್ಯಯುತ ಚರ್ಚೆಗೆ ಗ್ರಾಸವಾಗುವಂಥ ಆಶಯವನ್ನು ಹೊಂದಿರಬೇಕು. ಅದುಬಿಟ್ಟು ಪರಸ್ಪರ ವೈಯಕ್ತಿಕ ದಾಳಿ ಮತ್ತು ಕ್ರೋಧದಿಂದ ಕೂಡಿರುವುದಲ್ಲ. ಇಂತಹ ಮಾತಿನಿಂದ ಸಾಧಿಸುವುದೇನಾದರೂ ಇದೆಯೇ?

- ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT