ADVERTISEMENT

ಬೇವು– ಬೆಲ್ಲದ ಮಿಶ್ರಣ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಡಿಸೆಂಬರ್ 2020, 18:43 IST
Last Updated 7 ಡಿಸೆಂಬರ್ 2020, 18:43 IST

ತಂದೆ ಸತ್ತರೂ ಆ ವಿಷಯವನ್ನು ಮುಚ್ಚಿಟ್ಟು ಪುತ್ರನ ವಿವಾಹವನ್ನು ಗ್ರಾಮಸ್ಥರು ನೆರವೇರಿಸಿರುವುದು
(ಪ್ರ.ವಾ., ಡಿ. 5) ಒಂದು ಭಾವನಾತ್ಮಕ ಸಂಗತಿ. ಬೀದರ್ ಜಿಲ್ಲೆಯ ನಿರ್ಣಾ ಎಂಬ ಹಳ್ಳಿಯಲ್ಲಿ ನಡೆದಿರುವ ಈ ಘಟನೆ ಬೇವು-ಬೆಲ್ಲದ ಮಿಶ್ರಣದಂತಿದೆ. ಸಾಮಾನ್ಯವಾಗಿ ಮಂಗಳಕಾರ್ಯಗಳು ನಡೆಯುವ ಸಂದರ್ಭದಲ್ಲಿ ಸಾವು, ಅಪಘಾತದಂತಹ ಅವಘಡಗಳಾದಾಗ, ಇದೊಂದು ಅಶುಭಸೂಚಕ ಎಂದು ನಂಬುವವರೇ ಹೆಚ್ಚು. ಹೀಗಿರುವಾಗ, ನಿಗದಿಯಾಗಿದ್ದ ಮದುವೆಯನ್ನು ವರನ ತಂದೆಯ ಅನಿರೀಕ್ಷಿತ ಸಾವಿನಿಂದ ಮುಂದಕ್ಕೆ ಹಾಕದೆ, ಗ್ರಾಮಸ್ಥರೆಲ್ಲರೂ ಸೇರಿ ಅತ್ತ ಅವರ ಅಂತ್ಯಕ್ರಿಯೆ ನಡೆಸಿ, ಇತ್ತ ವಧು-ವರರಿಗೆ ಸಾವಿನ ವಿಷಯ ಬಹಿರಂಗಪಡಿಸದೆ ವಿವಾಹವನ್ನು ಸಾಂಗವಾಗಿ ನೆರವೇರಿಸಲು ಅನುವು ಮಾಡಿಕೊಟ್ಟಿರುವುದು, ಗ್ರಾಮಸ್ಥರ ಹೃದಯ ವೈಶಾಲ್ಯವನ್ನು ತೋರಿಸಿಕೊಟ್ಟಿದೆ.

- ಪ್ರತಿಭಾ ಟಿ.ಎಸ್.,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT