ADVERTISEMENT

ವಾಚಕರ ವಾಣಿ: ಕಾನೂನು ಶಿಕ್ಷಣ; ಚರ್ಚೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 19:30 IST
Last Updated 22 ಸೆಪ್ಟೆಂಬರ್ 2021, 19:30 IST

‘ಕಾನೂನು ಶಿಕ್ಷಣಕ್ಕೆ ಕನ್ನಡ ಮಾಧ್ಯಮ ಬೇಡವೇ?’ ಎಂಬ ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಾ. ಜಿನದತ್ತ ದೇಸಾಯಿ ಅವರ ಅಭಿಪ್ರಾಯ (ಸಂಗತ, ಸೆ. 21) ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಕ್ಷಿದಾರ ಅರಿಯದ ಭಾಷೆಯಲ್ಲಿ ಕೋರ್ಟ್‌ ವ್ಯವಹಾರ ನಡೆಸುವುದು ಅನ್ಯಾಯ ಎಂಬುದು ಲೇಖನದಲ್ಲಿ ಎತ್ತಿದ ಗಂಭೀರ ಸಂಗತಿಯಾಗಿದೆ.

ಕಾನೂನು ಪದವಿ ಅಧ್ಯಯನವನ್ನು ಕನ್ನಡ ಮಾಧ್ಯಮದಲ್ಲಿ ಆರಂಭಿಸುವುದಕ್ಕೆ ಪೂರಕವಾಗಿ ಸರ್ಕಾರವು ತುರ್ತಾಗಿ ಮಸೂದೆಯನ್ನು ಮಂಡಿಸಿ, ಹಿರಿಯ ಕಾನೂನು ತಜ್ಞರು ಮತ್ತು ನ್ಯಾಯಾಧೀಶರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ರಾಜ್ಯದಲ್ಲಿರುವ ಕಾನೂನು ವಿಶ್ವವಿದ್ಯಾಲಯವೇ ಇದರ ನೇತೃತ್ವ ವಹಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಕಾನೂನು ಶಿಕ್ಷಣ ಮತ್ತು ನ್ಯಾಯಾಲಯಗಳು ಗ್ರಾಮೀಣ ಮಟ್ಟದವರೆಗೂ ನಿಲುಕುವಂತಾಗುತ್ತದೆ. ವಿದ್ವಾಂಸರ ವಲಯದಲ್ಲಿ ಈ ಕುರಿತು ಹೆಚ್ಚೆಚ್ಚು ಚರ್ಚೆ ನಡೆಯಲಿ.
-ಡಾ. ಆನಂದಕುಮಾರ ಜಕ್ಕಣ್ಣವರ, ಕಾಗವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT