ADVERTISEMENT

ಹೆಚ್ಚುವರಿ ಪುಟ: ಪರಿಶೀಲಿಸಿ ನಿರ್ಧರಿಸಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST

ದ್ವಿತೀಯ ಪಿಯು ಪರೀಕ್ಷೆಯಲ್ಲಿ 40 ಪುಟಗಳ ಉತ್ತರ ಪತ್ರಿಕೆಯನ್ನು ಒದಗಿಸುತ್ತಿರುವುದು ಅಭಿನಂದನಾರ್ಹ. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪುಟಗಳನ್ನು ಒದಗಿಸುವುದು, ಅವುಗಳ ಸಂಖ್ಯೆಯನ್ನು ನಮೂದಿಸುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೆಲವೊಮ್ಮೆ ಒತ್ತಡ ಉಂಟು ಮಾಡುತ್ತಿತ್ತು. ಗಣಿತದಂತಹ ವಿಷಯದಲ್ಲಿ ಹೆಚ್ಚುವರಿ ಪುಟಗಳು ಅಪೇಕ್ಷಣೀಯ. ಆದರೆ ಜೀವವಿಜ್ಞಾನದಂತಹ ವಿಷಯಗಳಿಗೆ ಅಷ್ಟೊಂದು ಪುಟಗಳ ಅವಶ್ಯಕತೆ ಇರುವುದಿಲ್ಲ. ಪುಟಗಳು ಬಳಕೆಯಾಗದೇ ಉಳಿದುಬಿಡುತ್ತವೆ. ಅಂತಹ ವಿಷಯಗಳಿಗೆ ಪುಟಗಳ ಸಂಖ್ಯೆ ಕಡಿತಗೊಳಿಸಲು ಇರುವ ಸಾಧ್ಯತೆಯ ಬಗ್ಗೆ ಗಮನಹರಿಸಬೇಕು.

-ಮಂಜುನಾಥ್ ಜಿ.,ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT