ADVERTISEMENT

ಕೊಡುಗೈ ಕೈಂಕರ್ಯಕ್ಕೆ ತಲೆಬಾಗಬೇಕು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:45 IST
Last Updated 28 ಫೆಬ್ರುವರಿ 2020, 19:45 IST

ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡಿರುವ ಬಾಲಕನೊಬ್ಬ, ರ್ಶ್ವವಾಯು
ಪೀಡಿತ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದಿದ್ದಾನೆ(ಪ್ರ.ವಾ., ಫೆ. 27). ಇದನ್ನು ತಿಳಿದು, ಹಲವರು ಈ ಮಕ್ಕಳಿಗೆ ನೆರವಿನ ಹಸ್ತ ಚಾಚಲು ಮುಂದಾಗಿರುವುದನ್ನು ತಿಳಿದು ಎದೆ ತುಂಬಿಬಂತು. ಹಿಂದೆ ಮುಂದೆ ನೋಡದೇ, ಜಾತಿ, ಮತ, ಭಾಷೆ ಕೇಳದೇ, ನೊಂದವರಿಗೆ, ಕಷ್ಟದಲ್ಲಿ ಇರುವವರಿಗೆ ನೆರವು ನೀಡುವ ಕೈಗಳಿಗೆ ಕರುನಾಡಿನಲ್ಲಿ ಬರವಿಲ್ಲ. ಪೋಷಕರಿಲ್ಲದೇ ಅಂಗವಿಕಲ ಅಕ್ಕನ ಆರೈಕೆಗಾಗಿ ಓದಿಗೆ ತಿಲಾಂಜಲಿ ಇಟ್ಟಿದ್ದ ತಮ್ಮನ ತ್ಯಾಗಕ್ಕೆ ಇಂಥ ಮಾನವೀಯತೆ ಮಿಡಿದಿದೆ. ಮಾನವತೆಯ ಸಾಕಾರಮೂರ್ತಿಗಳ ಈ ಕೊಡುಗೈ ಕೈಂಕರ್ಯಕ್ಕೆ ಮನುಷ್ಯರಾದವರು ತಲೆ ಬಾಗಲೇಬೇಕು. ಮಾನವೀಯತೆ ಸತ್ತಿಲ್ಲ, ಸಾಯುವುದೂ ಇಲ್ಲ. ಅದೇ ಬದುಕು, ಅದೇ ಪಾಠ, ಅದೇ ಭಾರತೀಯ ಪರಂಪರೆ.

-ಸಂತೇಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT