ADVERTISEMENT

ಕಠಿಣ ಪ್ರಶ್ನೆಗಳಿಂದ ಹೆದರಿಸುವುದು ಬೇಡ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST

ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ವಿಜ್ಞಾನ ಪತ್ರಿಕೆಯ ಪ್ರಶ್ನೆಗಳು ಅತ್ಯಂತ ಕ್ಲಿಷ್ಟವಾಗಿದ್ದವು. ಯಾರನ್ನು ಮೆಚ್ಚಿಸುವ ಸಲುವಾಗಿ ಇಂತಹ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇಷ್ಟೊಂದು ಕಠಿಣ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಹೆದರಿಸಿ, ಅವರಲ್ಲಿ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಹುಟ್ಟಿಸಲು ಸಾಧ್ಯವೇ? ವಿಜ್ಞಾನದ ಸಹವಾಸವೇ ಬೇಡ ಎಂದುಕೊಂಡು ಅವರು ಬೇರೆ ಯಾವುದಾದರೂ ವಿಭಾಗಕ್ಕೆ ಗುಳೆ ಹೋಗಲು ಇಷ್ಟು ಸಾಕು.

ಮಕ್ಕಳು ಖುಷಿಯಿಂದ ವಿಜ್ಞಾನವನ್ನು ಕಲಿಯಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಪ್ರೀತಿಯಿಂದ ವಿಜ್ಞಾನವನ್ನು ಅಪ್ಪಿಕೊಳ್ಳಲು ದಾರಿ ಮಾಡಿಕೊಡಬೇಕು. ವಿಜ್ಞಾನದ ವಿಷಯವನ್ನು ಪರೀಕ್ಷೆಯಲ್ಲಿ ಸುಲಭವಾಗಿ ಎದುರಿಸಲು ಸ್ಥೈರ್ಯ ತುಂಬುವಂತೆ ಪ್ರಶ್ನೆಪತ್ರಿಕೆ ಇರಲಿ.

ಎಚ್.ಎಸ್.ಟಿ.ಸ್ವಾಮಿ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.