ADVERTISEMENT

ಸರ್ಕಾರದ ಜವಾಬ್ದಾರಿಯಲ್ಲವೇ!?

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 19:30 IST
Last Updated 18 ಜುಲೈ 2018, 19:30 IST

ಸರ್ಕಾರಿ ಶಾಲೆಗಳು ಹೆಚ್ಚಿಗೆ ಇರುವುದು ಹಳ್ಳಿ ಪ್ರದೇಶದಲ್ಲಿ. ಅಲ್ಲಿ ಕೂಲಿ ಮಕ್ಕಳೇ ಜಾಸ್ತಿ. ಪೇಟೆಯಲ್ಲಿ ಮಾತ್ರ ಹೈಟೆಕ್ ಶಾಲೆಗಳು! ಆದ್ದರಿಂದ ಸರ್ಕಾರದವರು ‘ಮಕ್ಕಳು ಬರೋಲ್ಲ’ ಅಂತ ಈಗಿರುವ ಶಾಲೆಗಳನ್ನು ಮುಚ್ಚದೆ, ಹೊಸ ಶಾಲೆ ತೆರೆಯದೆ, ಇದ್ದ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಜತೆಗೆ ಒಳ್ಳೆಯ ಶಿಕ್ಷಕರನ್ನು ನೇಮಿಸಬೇಕು. ಶಾಲೆಗಳಲ್ಲಿ ಬೋಧನೆ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳಬೇಕು.

ಅಲ್ಲದೇ ಊರಿನ ಹಿರಿಯರ, ಮುಖಂಡರ, ಪೋಷಕರ ಮನವೊಲಿಸಬೇಕು. ಅವರ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಈ ಪ್ರಯತ್ನ ಕೂಡ ಫಲ ಕೊಡದಿದ್ದರೂ ಉಳ್ಳವರ ಮಕ್ಕಳು ಬರದಿದ್ದರೂ ಬಡ ಕುಟುಂಬಗಳ ಮಕ್ಕಳಿಗೆ, ಕೂಲಿಕಾರರ ಮಕ್ಕಳಿಗೆ ಅನುಕೂಲ ಆಗಲಿ. ಯಾವ ಶಾಲೆಯನ್ನೂ ಮುಚ್ಚಬಾರದು. ಬೇರೆ ಶಾಲೆಯಲ್ಲಿ ವಿಲೀನಗೊಳಿಸುವ ಪ್ರಯತ್ನವನ್ನೂ ಮಾಡಬಾರದು. ಇದ್ದ ಶಾಲೆಗಳು ಮುಂದುವರೆಯಲಿ. ಅವನ್ನು ಮುಂದುವರೆಸುವುದು ಸರ್ಕಾರದ ಜವಾಬ್ದಾರಿ ಅಲ್ಲವೇ?

–ಟಿ.ಎಂ. ಮಾನಪ್ಪ, ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.