ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ‘ದೀವಟಿಗೆ ಸಲಾಂ’, ‘ಸಲಾಂ ಆರತಿ’, ‘ಸಲಾಂ ಮಂಗಳಾರತಿ’ ಎಂಬ ಪೂಜಾ ಕಾರ್ಯಗಳ ಹೆಸರನ್ನು ‘ದೀವಟಿಗೆ ನಮಸ್ಕಾರ’, ‘ಆರತಿ ನಮಸ್ಕಾರ’, ‘ಮಂಗಳಾರತಿ ನಮಸ್ಕಾರ’ ಎಂದು ಬದಲಿಸಲು ಮುಜರಾಯಿ ಇಲಾಖೆ ಮುಂದಾಗಿರುವುದು (ಪ್ರ.ವಾ., ಡಿ. 11) ಸರಿಯಲ್ಲ. ಹಿಂದೂ ಆರತಿಯ ಜೊತೆ ‘ಸಲಾಂ’ ಸೇರಿರುವುದು ಹಿಂದೂ– ಮುಸ್ಲಿಂ ಸಮುದಾಯಗಳ ಬಾಂಧವ್ಯದ ಸಂಕೇತ. ಟಿಪ್ಪು ಆಳ್ವಿಕೆಯ ಕಾಲದಿಂದ ನಡೆದುಬಂದ ರೂಢಿ. ಅನ್ಯೋನ್ಯತೆಯ ಇಂತಹ ಕೊಂಡಿಗಳನ್ನು ಕಳಚುವ ಮೂಲಕ ಯುವ ಪೀಳಿಗೆಗೆ ಸರ್ಕಾರ ಯಾವ ಸಂದೇಶ ನೀಡಲಿದೆ?
‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ’ ಎಂಬ ಅರ್ಥಪೂರ್ಣ ಸಂದೇಶವನ್ನು ಡಿವಿಜಿ ನೀಡಿದ್ದಾರೆ. ಅದನ್ನು ನಾವು ಈಗ ಉಪೇಕ್ಷಿಸುತ್ತಿದ್ದೇವೆ. ‘ಸಲಾಂ’ ಪದವನ್ನು ಬದಲಿಸಬೇಕು ಎಂದು ಭಕ್ತಾದಿಗಳಿಂದ ಒತ್ತಾಯ ಬಂದಿತ್ತು ಎಂಬುದೆಲ್ಲ ನೆವ ಅಷ್ಟೆ.
- ತಾ.ಸಿ.ತಿಮ್ಮಯ್ಯ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.