ADVERTISEMENT

ವಾಚಕರ ವಾಣಿ: ಆತ್ಮನಿರ್ಭರ ಶಬ್ದದ ಅರ್ಥ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 16:17 IST
Last Updated 25 ಆಗಸ್ಟ್ 2020, 16:17 IST

‘ಪೌಡ್ರು ಹಾಕ್ಕೊಳ್ಳೊ, ತಲೆ ಬಾಚ್ಕೊಳ್ಳೊ...’ ಎಂಬ ಲೇಖನದ (ಪ್ರ.ವಾ., ಆ. 25) ಕೊನೆಯಲ್ಲಿ ರಘುನಾಥ ಚ.ಹ. ಅವರು ‘ಏನಿದು ಆತ್ಮನಿರ್ಭರ’ ಎಂದು ಪ್ರಶ್ನೆ ಹಾಕಿಕೊಂಡು, ಶಬ್ದಕೋಶಗಳ ನೆರವಿನಿಂದ ‘ಆತ್ಮನಿರ್ಭರ’ ಶಬ್ದಕ್ಕೆ ‘ಆತ್ಮದ ಉನ್ನತೀಕರಣದ ಸ್ಥಿತಿ ಎನ್ನಬಹುದೇನೋ?’ ಎಂದು ಸಂಶಯ ತಾಳಿರುವಂತಿದೆ. ಆದರೆ, ಶಬ್ದಕೋಶಗಳ ನೆರವಿಲ್ಲದೆ ಬಹುಶಃ ಬಹುಮಟ್ಟಿನ ಭಾರತೀಯರಿಗೆ ಅದರ ಅರ್ಥ ಈಗಾಗಲೇ ಸ್ಪಷ್ಟವಾಗಿದೆ ಎಂದುಕೊಂಡಿದ್ದೇನೆ. ‘ಆತ್ಮ’ ಮತ್ತು ‘ನಿರ್ಭರ’ ಎಂಬ ಎರಡು ಸಂಸ್ಕೃತ ಶಬ್ದಗಳನ್ನು ಒಟ್ಟಿಗೆ ಬೆಸೆದು ಆತ್ಮನಿರ್ಭರ ಎಂಬ ಶಬ್ದವನ್ನು ಟಂಕಿಸಲಾಗಿದೆ. ಇದು ಉತ್ತರಭಾರತದ ಹಿಂದಿ ಜಗತ್ತಿನಲ್ಲಿ ಅತ್ಯಂತ ಚಿರಪರಿಚಿತವಾದ ಶಬ್ದ. ಅದರ ಅರ್ಥ ‘ಆತ್ಮಾವಲಂಬನೆ’ (self reliance, self dependence) ಎಂದು.

ಡಾ. ಹರದೇವ ಬಾಹರಿ ಅವರ ‘ರಾಜಪಾಲ್ ಹಿಂದಿ ಶಬ್ದಕೋಶ’ದ 81ನೇ ಪುಟದಲ್ಲಿ ‘ಆತ್ಮನಿರ್ಭರ’ ಶಬ್ದಕ್ಕೆ ‘ಆತ್ಮಾವಲಂಬಿ’ ಎಂದೇ ಅರ್ಥಕೊಟ್ಟಿದ್ದಾರೆ. ‘ಆತ್ಮನಿರ್ಭರ ಭಾರತ’ ಎಂದರೆ ‘ತನ್ನನ್ನು ತಾನು ಅವಲಂಬಿಸಿದ ಭಾರತ’ ಎಂದು. ರಘುನಾಥರು ಹೇಳುವ ‘ಆತ್ಮದ ಉನ್ನತೀಕರಣ’ ಎಂದಲ್ಲ ಹಾಗೂ ಅಷ್ಟೊಂದು ಅರ್ಥದ ಭಾರವನ್ನು ಆ ಶಬ್ದ ಖಂಡಿತಾ ತಡೆಯಲಾರದು. ಬಹುಶಃ ನರೇಂದ್ರ ಮೋದಿಯವರನ್ನು ಲೇವಡಿ ಮಾಡುವ ಅತ್ಯುತ್ಸಾಹದ ಭರದಲ್ಲಿ ಅದರ ಅರ್ಥವನ್ನು ಅವರು ಹಿಗ್ಗಾಮುಗ್ಗಾ ಎಳೆದಾಡಿದಂತಿದೆ!

-ಡಾ. ಆರ್.ಲಕ್ಷ್ಮೀನಾರಾಯಣ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.