ADVERTISEMENT

ಈ ಜಲನಿಧಿ ಜಲಧಿಯ ಪಾಲಾಗಬಾರದು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 17:19 IST
Last Updated 2 ಆಗಸ್ಟ್ 2021, 17:19 IST

ರಾಜ್ಯದ ಆರು ಜಿಲ್ಲೆಗಳು ಜಲಾವೃತ ಆಗಿವೆ. ಇನ್ನೊಂದೆರಡು ವಾರಗಳಲ್ಲಿ ನೀರೆಲ್ಲ ಖಾಲಿಯಾಗಿ ವರ್ಷಾಂತ್ಯದಲ್ಲಿ ಬರಗಾಲದ ಸಮಸ್ಯೆ ಎದುರಾಗುವಂಥ ವಿಲಕ್ಷಣ ಕಾಲಘಟ್ಟ ಇದು. ಈಗ ಸಂಚಯವಾದ ನೀರನ್ನು ಕೆಲವು ಸ್ಥಳಗಳಲ್ಲಿ ಕೆಲವು ಕಾಲವಾದರೂ ಹಿಡಿದಿಟ್ಟು, ಅದು ನೆಲದೊಳಕ್ಕೆ ಇಂಗುವಂತೆ ಮಾಡಲು ನೀರಾವರಿ ಇಲಾಖೆ ಜನರಿಗೆ ಪ್ರೇರಣೆ ನೀಡಬಹುದೆ? ಹಿಂದಿನ ವರ್ಷ ದೆಹಲಿಯ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಅಂಥ ದ್ದೊಂದು ಯೋಜನೆಯನ್ನು ರೂಪಿಸಿತ್ತು: ನೀರನ್ನು ತಮ್ಮಲ್ಲೇ ಎರಡು ತಿಂಗಳು ಕಾಲ ಹಿಡಿದಿಟ್ಟುಕೊಂಡ ಯಮುನಾ ತೀರದ ರೈತರಿಗೆ ಅದು ಹಣ ನೀಡುವುದಾಗಿ ಘೋಷಿಸಿತ್ತು. ಅದರಿಂದ ಪ್ರಯೋಜನವಾಗಿದ್ದೇ ಹೌದಾ ದರೆ ನಮ್ಮಲ್ಲೂ ಅಂಥದ್ದೊಂದು ಕ್ರಮಕ್ಕೆ ತುರ್ತು ಚಾಲನೆ ಕೊಡಬಹುದೆ?

ಯಾರು ಎಷ್ಟು ನೀರನ್ನು ಸೆರೆ ಹಿಡಿದಿದ್ದಾರೆ ಎಂಬು ದರ ಸಮೀಕ್ಷೆಗೆ ಇಸ್ರೊ ನೆರವಾಗಬಹುದು. ಯಾಕೆ ಅಂಥ ದ್ದೊಂದು ಪ್ರಯೋಗವನ್ನು ಮಾಡಿ ನೋಡಬಾರದು? ಮಾಡದಿದ್ದರೆ, ಈ ಮಳೆಯಲ್ಲಿ ಮೇಲ್ಮಣ್ಣು, ಸರ್ಕಾರಿ ಗೊಬ್ಬರ, ರೈತರ ಶ್ರಮ ಎಲ್ಲವೂ ನೀರುಪಾಲಾಗಿ ಅಣೆಕಟ್ಟೆ ಸೇರಿ, ಅಲ್ಲಿ ಹೂಳು ತುಂಬಿ ರೈತರ ಭವಿಷ್ಯ ಇನ್ನಷ್ಟು ಕರಾಳ ಆದೀತು. ನಮ್ಮ ಶಾಸಕಾಂಗ ಹಾಗೂ ಕಾರ್ಯಾಂಗ ಅಂಥ ದೂರದರ್ಶಿತ್ವವನ್ನು ಪ್ರದರ್ಶಿಸಬೇಕು. ಅದನ್ನು ಬಿಟ್ಟು ತುರ್ತು ಪರಿಹಾರದ ನಾಟಕದಲ್ಲೇ ಮುಳುಗಿದ್ದರೆ ನಾಳಿನ ಕರ್ನಾಟಕಕ್ಕೆ ಅದು ಭಾರೀ ಹೊರೆಯಾದೀತು.

-ನಾಗೇಶ ಹೆಗಡೆ,ಕೆಂಗೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.