ADVERTISEMENT

ಸಾಧಕ ಮನಸ್ಸುಗಳಿಗೆ ಧನ್ಯವಾದ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಡಿಸೆಂಬರ್ 2019, 19:45 IST
Last Updated 25 ಡಿಸೆಂಬರ್ 2019, 19:45 IST
cartoon
cartoon   

ತರಕಾರಿ ಮಾರಾಟಗಾರರ ಪುತ್ರಿ ಅಧಿಕಾರಿ, ಜೈಲು ಅಧಿಕಾರಿ ಈಗ ಎ.ಸಿ., ಪಿಡಿಒ ಈಗ ಮುಖ್ಯಾಧಿಕಾರಿ ಎಂಬಂತಹ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಡತನ, ಹಸಿವು, ಕಷ್ಟದ ಅನುಭವ ಇರುವವರು, ‘ನಾವು ಓದದೇ ಇದ್ದರೆ ನಮ್ಮ ಮುಂದಿನ ದಾರಿ ಕಷ್ಟಕರ’ ಎಂದರಿತು, ಅವಿರತ ಶ್ರಮ ಹಾಕಿ ಓದುತ್ತಾರೆ. ಈ ಮುಖಾಂತರ ತಮ್ಮ ಬದುಕಿನ ಮುಂದಿನ ಮಾರ್ಗ ಕಂಡುಕೊಳ್ಳಲು ಪಣ ತೊಟ್ಟು, ಹಾಗೆಯೇ ಅಧಿಕಾರ ಹಿಡಿದು ಮಾದರಿಯಾಗುತ್ತಿದ್ದಾರೆ. ಓದು ಅಧ್ಯಯನಶೀಲರದೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂದು ನಿರೂಪಿಸುತ್ತಿರುವ ಸಾಧಕ ಮನಸ್ಸುಗಳಿಗೆ ಧನ್ಯವಾದ ಹೇಳಲೇಬೇಕು. ಹಾಗೆಯೇ ಕಷ್ಟಪಟ್ಟು ಓದಿ ಅಧಿಕಾರಿಗಳಾದವರು ಬಡವರ, ಅಸಹಾಯಕರ, ನೊಂದವರ ಪಾಲಿಗೆ ಸಹಾನುಭೂತಿ, ಅನುಕಂಪ ತೋರಿಸುತ್ತಾ, ಓದುವವರಿಗೆ ಕೈಮರ ಆಗಬೇಕಿದೆ. ಈ ಕೆಲಸದಲ್ಲಿಯೂ ಅವರು ಯಶಸ್ಸು ಪಡೆದಲ್ಲಿ ನಾಡಿಗೆ ನಿಜವಾದ ಅರ್ಥದಲ್ಲಿ ಕೊಡುಗೆಯಾಗಬಲ್ಲರು.

ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT