ADVERTISEMENT

ಪ್ರಕೃತಿಯ ಎದುರು ಆಟ ಬೇಡ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 20:30 IST
Last Updated 26 ಮಾರ್ಚ್ 2020, 20:30 IST

ಪ್ರಕೃತಿಯು ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುತ್ತದೆ ಎಂಬ ಮಾತಿದೆ. ಅದರಂತೆ ಪ್ರಕೃತಿಯು ಭೂಕಂಪ, ಪ್ರವಾಹ, ಸುನಾಮಿ ಯಂತಹ ನೈಸರ್ಗಿಕ ವಿಕೋಪಗಳನ್ನು ಉಂಟು ಮಾಡಿ, ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ ಎಂದಾದರೆ, ಈಗ ಹರಡಿರುವ ಕೊರೊನಾ– 2 ಸೋಂಕು ಸಹ ಪ್ರಕೃತಿಯ ರಕ್ಷಣಾ ತಂತ್ರವೇ ಆಗಿರುತ್ತದೆ. ಹಾಗಿದ್ದರೆ, ಅದನ್ನು ತಡೆಗಟ್ಟಲು ಮಾನವ ಮಾಡುವ ಯಾವ ತಂತ್ರವೂ ಅಷ್ಟು ಸುಲಭವಾಗಿ ಫಲಿಸದು ಎಂದರ್ಥ. ಮಾನವ ಮತ್ತು ಪ್ರಕೃತಿಯ ನಡುವೆ ಹೋರಾಟ ನಡೆದರೆ, ಕೊನೆಗೆ ಗೆಲ್ಲುವುದು ಪ್ರಕೃತಿಯೇ. ಇದನ್ನು ಅರಿತು ನಾವು ಪರಿಸರ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮಗಳು ತಪ್ಪಿದ್ದಲ್ಲ.

ಸುರೇಶ ಗೌರೆ, ನವನಿಹಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT