ADVERTISEMENT

ಇದು ‘ಹೆಲಿ ಯೋಗ’ದ ಕಾಲ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ಇದು ‘ಹೆಲಿ ಯೋಗ’ದ ಕಾಲ
ಇದು ‘ಹೆಲಿ ಯೋಗ’ದ ಕಾಲ   

ಯೋಗವನ್ನು ಯಾವ ರೀತಿಯೆಲ್ಲಾ ಅಭ್ಯಾಸ ಮಾಡಬಹುದು? ಬಿಯರ್ ಯೋಗ, ಗೋಟ್ ಯೋಗ, ಬಿರಿಯಾನಿ ಯೋಗ, ಡಾಗ್ ಯೋಗ... ಎಷ್ಟೊಂದು ರೀತಿ! ಈ ಸಾಲಿಗೆ ಸೇರುವ ಮತ್ತೂ ಒಂದು ವಿಶೇಷ ಯೋಗವಿದೆ. ಅದು ‘ಹೆಲಿ ಯೋಗ’.

ಯೋಗ ಮಾಡಲು ಪ್ರಶಾಂತ ಸ್ಥಳವಿರಬೇಕು. ಅದು ನಿಸರ್ಗದ ತಾಣವಾಗಿದ್ದರೆ ಮನಸ್ಸಿಗೆ ಇನ್ನೂ ಹುಮ್ಮಸ್ಸು. ಆದರೆ ನಗರದ ಮಧ್ಯೆ ಇರುವವರು ಇದನ್ನು ನಿರೀಕ್ಷೆ ಮಾಡುವುದಾದರೂ ಹೇಗೆ? ಜೊತೆಗೆ ಸಮಯದ ಅಭಾವ. ಹಾಗೆಂದು ಯೋಚಿಸಬೇಕಿಲ್ಲ. ನಿಮ್ಮನ್ನೇ ಅಂಥ ಜಾಗಕ್ಕೆ ಕರೆದೊಯ್ಯುತ್ತೇವೆ ಎಂದಿದ್ದು ಲಾಸ್‌ ವೇಗಾಸ್‌ನ ‘ಸೈಲೆಂಟ್ ಶವಾಸನ’ ಯೋಗ ಸಂಸ್ಥೆ. ಅಲ್ಲಿನ ಮೇವ್‌ರಿಕ್ ಹೆಲಿಕಾಪ್ಟರ್‌ ಸಂಸ್ಥೆಯೊಂದಿಗೆ ಕೈಜೋಡಿಸಿ ಇಂಥದ್ದೊಂದು ನೂತನ ಯೋಗದ ರೀತಿಯನ್ನು ಆರಂಭಿಸಿತು.

ಸಿನ್ ಸಿಟಿಯಿಂದ 60 ಮೈಲಿ ದೂರದಲ್ಲಿರುವ, ಕಲ್ಲುಬೆಟ್ಟಗಳೇ ಆವೃತವಾಗಿರುವ, ಪ್ರಶಾಂತ ಪ್ರಕೃತಿಯ ತಾಣವಾಗಿರುವ ವ್ಯಾಲಿ ಆಫ್ ಫೈರ್‌ ಸ್ಟೇಟ್ ಪಾರ್ಕ್‌ಗೆ ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿನ ನಿಶ್ಶಬ್ದ ವಾತಾವರಣದಲ್ಲಿ 75 ನಿಮಿಷ ಯೋಗಾಭ್ಯಾಸ ಮಾಡಲಾಗುತ್ತದೆ.

ADVERTISEMENT

ಒಂದು ಬಾರಿಗೆ ಆರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ. ಯೋಗ ಹೇಳಿಕೊಡುವವರು ಮಾರ್ಗದರ್ಶನ ಕೇಳಿಸಿಕೊಳ್ಳಲು ಪ್ರತಿ ವಿದ್ಯಾರ್ಥಿಗೂ ವೈರ್‌ಲೆಸ್ ಹೆಡ್‌ಸೆಟ್‌ಗಳನ್ನು ನೀಡಲಾಗಿರುತ್ತದೆ. ಯೋಗ ಮಾಡುವವರಿಗೆ ಸ್ಫೂರ್ತಿ ತುಂಬುವ ಸಂಗೀತವೂ ಜತೆಗಿರುತ್ತದೆ. ಒಬ್ಬೊಬ್ಬರಿಗೆ $3,500 ಶುಲ್ಕ. ಈ ಐಷಾರಾಮಿ ಯೋಗಾಭ್ಯಾಸಕ್ಕೆ ಜನ ಮುಗಿಬೀಳುತ್ತಿದ್ದಾರೆ. ಹಲವು ಕಡೆ ಹೆಲಿಯೋಗ ಆರಂಭವಾಗಿದೆ ಕೂಡ.

ಇದರೊಂದಿಗೆ ಬೆಟ್ಟದ ಮೇಲೆ ಹೋಗಿ ಮಸಾಜ್ ಮಾಡಿಸಿಕೊಳ್ಳುವ ಪರಿಪಾಠ ‘ಹೆಲಿ ಮಸಾಜ್‌’ ಕೂಡ ಎಲ್ಲೆಲ್ಲೂ ಪ್ರಚಲಿತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.