ADVERTISEMENT

ಕಾಡು ಕಾಪಾಡಲು...

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಕಾಡು ಕಾಪಾಡಲು...
ಕಾಡು ಕಾಪಾಡಲು...   

ಪರಿಸರ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತವೆ.  ಆದರೆ ತೈಪೆಯಲ್ಲಿನ ಈ ಕೆಲಸ ನೆನಪಿನಲ್ಲುಳಿಯುವಂಥದ್ದು.

ನಗರದ ಜನರಿಗೆ ಕಾಡನ್ನು ನೆನಪಿಸುವ, ಪ್ರಕೃತಿಯನ್ನು ಹತ್ತಿರ ತರುವ, ಪರಿಸರವನ್ನು ಕಾಪಾಡಬೇಕಾದ ಅಗತ್ಯವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡಲೆಂದು ಸಿಟಿ ಬಸ್ಸೊಂದನ್ನು ಪುಟ್ಟ ಕಾಡಾಗಿ ಮಾರ್ಪಾಡು ಮಾಡಲಾಗಿದೆ. ಬಸ್ಸಿನ ತುಂಬಾ ಹಸಿರು ರಾರಾಜಿಸುತ್ತಿದೆ.

ಹೂ ಗಿಡಗಳ ರಾಶಿ ಕಣ್ಣಿಗೆ ಹಿತ ನೀಡುತ್ತವೆ. ಸೀಟ್‌ಗಳಿಗೆ ಹಾಗೂ ವಾಕ್‌ವೇಗೆ ಕೃತಕ ಹುಲ್ಲು ಹಾಸನ್ನು ಬಳಸಲಾಗಿದೆ. ಬೇಲಿ, ಹೂ ಬಳ್ಳಿ, ಪುಟ್ಟ ಗಿಡಗಳು ಬಸ್ಸಿನ ತುಂಬಾ ತುಂಬಿಕೊಂಡಿವೆ.

ADVERTISEMENT

ವಿನ್ಯಾಸಕರಾದ ಆಲ್ಫೀ ಲಿನ್ ಮತ್ತು ಷಿಯೊ ಕ್ವಿಂಗ್ ಯಾಂಗ್ ಈ ಮೊದಲ ‘ಫಾರೆಸ್ಟ್ ಬಸ್’ ವಿನ್ಯಾಸಗೊಳಿಸಿದ್ದು. ಐದು ದಿನಗಳವರೆಗೆ ತಾತ್ಕಾಲಿಕವಾಗಿ ಈ ಬಸ್‌ ಸಂಚಾರ ಮಾಡಿದೆ. ಇದನ್ನು ನೋಡಿದ ಪ್ರಯಾಣಿಕರು ಇದರಿಂದ ಸ್ಫೂರ್ತಿ ತುಂಬಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.