ADVERTISEMENT

ಫಿಟ್‌ನೆಸ್‌ಗಾಗಿ ಡಾನ್ಸ್‌ ಮೊರೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಫಿಟ್‌ನೆಸ್‌ಗಾಗಿ ಡಾನ್ಸ್‌ ಮೊರೆ
ಫಿಟ್‌ನೆಸ್‌ಗಾಗಿ ಡಾನ್ಸ್‌ ಮೊರೆ   

ಶಿಲೆಯಲ್ಲಿ ಕಡೆದಂಥ ಮೈಮಾಟ, ಮಾದಕ ತುಟಿ, ಹಾಲಲ್ಲಿ ಮಿಂದಂತಹ ಮುಖ...

ಹೀಗಿದ್ದಾರೆ ಎಲಿ ಅವ್ರಾಮ್.

ಹಿಂದಿಯ ಬಿಗ್‌ಬಾಸ್‌ ಮೂಲಕ ಜನಪ್ರಿಯತೆ ಗಳಿಸಿದ ಎಲಿ ಅವ್ರಾಮ್ ಮೊದಲ ಬಾರಿ ನಟಿಸಿದ್ದು ಹಿಂದಿಯ ‘ಮಿಕ್ಕಿ ವೀರಸ್‌’ ಸಿನಿಮಾದಲ್ಲಿ. ಸದ್ಯ ತಮಿಳು, ತೆಲುಗು ಭಾಷೆಗಳಲ್ಲಿಯೂ ಅವಕಾಶ ಪಡೆದಿರುವ ಈ ಚೆಲುವೆ ಎಷ್ಟೇ ಬ್ಯುಸಿಯಾಗಿದ್ದರೂ, ವರ್ಕೌಟ್‌ ಮಾಡುವುದನ್ನು ಮರೆಯುವುದಿಲ್ಲ. ಇತ್ತೀಚೆಗಷ್ಟೇ ವರ್ಕೌಟ್‌ ಮಾಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಾಕಿ ಸುದ್ದಿಯಾಗಿದ್ದರು.

ADVERTISEMENT

ಬಣ್ಣದ ಲೋಕದಲ್ಲಿ ಚಾಲ್ತಿಯಲ್ಲಿರಲು ದೇಹ ಫಿಟ್‌ ಆಗಿರುವುದು ಅಗತ್ಯ ಎಂಬುದನ್ನು ಮನಗಂಡಿರುವ ಈ ಚೆಲುವೆ ಅದಕ್ಕಾಗಿ ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಫಿಟ್‌ನೆಸ್‌ಗೆ ಇವರು ಬಗೆಬಗೆ ದಾರಿಯನ್ನು ಕಂಡುಕೊಂಡಿದ್ದಾರೆ. ನೃತ್ಯ, ವರ್ಕೌಟ್‌, ಸಮರ ಕಲೆ, ಕ್ರೀಡೆಯ ಮೂಲಕ ದೇಹ ದಂಡಿಸುತ್ತಾರೆ.

‘ನೃತ್ಯದ ಸಾಂಗತ್ಯವಿರುವುದು ಫಿಟ್‌ನೆಸ್‌ಗೆ ನೆರವಾಗಿದೆ. ಬ್ಯಾಲೆ, ಮಾಡರ್ನ್‌, ಫ್ಯೂಷನ್‌ ನೃತ್ಯಗಳನ್ನು ಮಾಡುತ್ತೇನೆ. ನಾನು ಅಥ್ಲಿಟ್‌. ಏಳು ವರ್ಷವಿರುವಾಗಲೇ ಫಿಗರ್‌ ಸ್ಕೇಟ್‌ ಕಲಿತಿದ್ದೆ. ಒಲಿಂಪಿಕ್‌ಗೆ ಹೋಗಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಹದಿನೈದು ವರ್ಷವಿರುವಾಗ ಫಿಗರ್‌ ಸ್ಕೇಟಿಂಗ್‌ ಮಾಡುತ್ತಿದ್ದಾಗ ಗಾಯವಾಯಿತು. ಈ ಕಾರಣಕ್ಕೆ ಅದನ್ನು ಆಡುವುದನ್ನು ಕಡಿಮೆ ಮಾಡಿದೆ. ಜಿಮ್ನಾಸ್ಟಿಕ್‌, ಕುದುರೆ ಸವಾರಿ, ಮಿಶ್ರ ಸಮರ ಕಲೆ, ಫುಟ್‌ಬಾಲ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಇವೆಲ್ಲ ದೈಹಿಕವಾಗಿ ಫಿಟ್‌ ಆಗಿಸುವುದರ ಜೊತೆಗೆ ಮಾನಸಿಗೂ ನೆಮ್ಮದಿ ನೀಡುತ್ತದೆ’ ಎನ್ನುತ್ತಾರೆ ಎಲಿ.

ಎಷ್ಟೇ ಬ್ಯುಸಿಯಾಗಿದ್ದರೂ ಪ್ರತಿದಿನ ಮೂರು ಗಂಟೆ ಕಸರತ್ತು ಮಾಡುವುದನ್ನು ತಪ್ಪಿಸುವುದಿಲ್ಲ. ಹಾಗೆಂದು ಎಮಿಗೆ ಸಪೂರವಾಗಬೇಕೆಂಬ ಬಯಕೆಯೂ ಇಲ್ಲ. ದೇಹವು ಫಿಟ್‌ ಆಗಿರುವುದರ ಜೊತೆಗೆ ಆರೋಗ್ಯಕರವಾಗಿರಬೇಕು ಎಂಬ ಬಯಕೆ ಇವರದು.

ಎಮಿಯ ಮುಂಜಾನೆ ಆರಂಭವಾಗುವುದು ಗ್ರೀನ್‌ ಟೀ ಜೊತೆಗೆ. ನ್ಯೂಟ್ರಿಷಿಯನ್‌ ಪೌಡರ್‌, ಮೊಟ್ಟೆಯ ಬಿಳಿ ಭಾಗ, ಹಣ್ಣುಗಳನ್ನು ಬೆಳಿಗ್ಗೆ ಸೇವಿಸುತ್ತಾರೆ. ಮಧ್ಯಾಹ್ನ ಸಲಾಡ್‌, ಟೋಫು ತಿನ್ನುತ್ತಾರೆ. ರಾತ್ರಿ ಸಲಾಡ್‌, ಸೂಪ್‌... ಹೀಗೆ ಲಘು ಆಹಾರ ಸೇವಿಸುತ್ತಾರೆ. ಬಿರಿಯಾನಿ, ಬಟರ್‌ ಚಿಕನ್, ಚಾಕೊಲೇಟ್ ಇಷ್ಟ. ಆದರೆ ಡಯೆಟ್‌ ಕಾರಣಕ್ಕೆ ಬಾಯಿಗೆ ಕಡಿವಾಣ ಹಾಕಿದ್ದಾರೆ. ಮಸಾಲೆ ಪದಾರ್ಥಗಳನ್ನು ತಿನ್ನವುದಿಲ್ಲ. ಸ್ಮೂತಿ, ಅನ್ನ, ಸಲಾಡ್‌ಗಳನ್ನು ಹೆಚ್ಚು ಸೇವಿಸುತ್ತಾರೆ. ಕೂದಲು, ಚರ್ಮದ ಹೊಳಪಿಗೆ ಆಲಿವ್‌ ಆಯಿಲ್‌ ಬಳಸುತ್ತಾರೆ.

**

ಕೆಲವರು ಆರಂಭದಲ್ಲಿ ಅತ್ಯುತ್ಸಾಹದಿಂದ ವರ್ಕೌಟ್‌ ಮಾಡುತ್ತಾರೆ. ಎರಡು ವಾರಗಳ ನಂತರ ನಿಲ್ಲಿಸಿ ಬಿಡುತ್ತಾರೆ. ವರ್ಕೌಟ್ ನಿಧಾನವಾಗಿಯೇ ಆರಂಭಿಸಿ. ದೀರ್ಘಾವಧಿ ಗುರಿಯನ್ನು ಇರಿಸಿಕೊಳ್ಳಿ.  ನಿಮ್ಮ ದೇಹದಲ್ಲಿ ಆಗಿರುವ ಬದಲಾವಣೆ ಕಂಡುಕೊಳ್ಳಲು ಮೂರು ತಿಂಗಳಾದರೂ ಬೇಕು. ಹಾಗಾಗಿ ತಾಳ್ಮೆ ಇರಲಿ.

–ಎಲಿ ಅವ್ರಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.