ADVERTISEMENT

ಭಲೇ ಬಿಲ್ಲುಗಾತಿ!

​ಪ್ರಜಾವಾಣಿ ವಾರ್ತೆ
Published 7 ಜನವರಿ 2016, 19:30 IST
Last Updated 7 ಜನವರಿ 2016, 19:30 IST

ಎರಡೂ ಕೈಗಳಿಂದ ಬಾಣ ಪ್ರಯೋಗ ಮಾಡಲು ಸಮರ್ಥನಾದ ಕಾರಣ ಸವ್ಯಸಾಚಿ ಎಂಬ ಬಿರುದು ಪಡೆದ ಅರ್ಜುನನಿಗೂ ಇಂಥ ಕರಾಮತ್ತು ಗೊತ್ತಿರಲಿಲ್ಲವೇನೋ! ಬಳ್ಳಿ ದೇಹವನ್ನು ಚೇಳಿನಂತೆ ಬಾಗಿಸಿ ಎತ್ತಿದ ಕಾಲುಗಳಲ್ಲಿ ಬಿಲ್ಲು ಹಿಡಿದು ಇಪ್ಪತ್ತು ಅಡಿ ದೂರದಲ್ಲಿರುವ ಫಲಕವನ್ನು ಚುಚ್ಚಿ ನುಚ್ಚುನೂರು ಮಾಡಿದ್ದಾರೆ 26 ವರ್ಷದ ಈ ಸಾಹಸಿ ಕ್ಯಾಲಿಫೋರ್ನಿಯಾದ ನ್ಯಾನ್ಸಿ ಸಿಫಿಕರ್. 

ಐದೂವರೆ ಇಂಚು ವ್ಯಾಸವಿರುವ ಗುರಿಯ ಮೇಲೆ ಪ್ರಯೋಗಿಸಿದ ಬಾಣ ನಿಶ್ಚಿತವಾದ ಗುರಿಯನ್ನು ಮುಟ್ಟಿದೆ. ಲಾಸ್ ಏಂಜೆಲೀಸ್‌ನಲ್ಲಿ ನಡೆಸಿದ ಪ್ರಯೋಗ 2015ರ ಗಿನ್ನಿಸ್ ದಾಖಲೆಯ ಪುಸ್ತಕವನ್ನು ಸೇರಿದೆ. ‘ಬಿಲ್ವಿದ್ಯೆಗೆ ರಾಬಿನ್‌ಹುಡ್ ಪ್ರೇರಣೆ, ಆತನೇ ನನ್ನ ಮಾನಸಿಕ ಗುರು’ ಎಂದಿರುವ ನ್ಯಾನ್ಸಿ, ಸರ್ಕಸ್ ಕಂಪೆನಿಯ ಕಲಾವಿದೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.