ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2017, 19:30 IST
Last Updated 25 ಜೂನ್ 2017, 19:30 IST

1)ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯದ ಕುರಿತು ರಚಿತವಾಗಿರುವ ‘ಎಟರನಲ್ ಇಂಡಿಯಾ’ ಈ ಕೃತಿಯ ಲೇಖಕರು ಯಾರು?
a) ಜೆ.ಎಂ. ಬ್ಯಾರಿ b) ಕುಲದೀಪ್ ನಯ್ಯರ್
c) ಖುಷವಂತ್ ಸಿಂಗ್ d) ಇಂದಿರಾ ಗಾಂಧಿ

2) ಆಸ್ಟ್ರೀಯದ ಕರೆನ್ಸಿ (ನಾಣ್ಯ) ‘ಯುರೋ’ ಆದರೆ ಬ್ರೆಜಿಲ್ ದೇಶದ ಕರೆನ್ಸಿ ಯಾವುದು ?
  a) ರೀಲ್ b) ಯೆನ್ c) ರಿಯಾಲ್ d) ಪೀಸೊ

3) ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ತೆಲುಗು ಕವಿ ಸಿ. ನಾರಾಯಣ ರೆಡ್ಡಿ ಅವರು ಇತ್ತೀಚೆಗೆ ನಿಧನರಾದರು. ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಂದಿದೆ?  
a) ಪರಿಣತವಾಣಿ    b) ವಿಶ್ವಂಭರಂ
c) ಬಾಲ ಭಾರತಂ d) ರಕ್ಕಲ ಸಂತಕಾಲು

ADVERTISEMENT

4)ದೇಶದಲ್ಲಿ ಅತಿ ಹೆಚ್ಚು ಬಂಜರು ಭೂಮಿ ಯಾವ ರಾಜ್ಯದಲ್ಲಿದೆ?
a) ಮಣಿಪುರ b) ರಾಜಸ್ತಾನ
c) ಮಹಾರಾಷ್ಟ್ರ d) ಮಧ್ಯಪ್ರದೇಶ

5) 2009ರಲ್ಲಿ ನಿಕ್ಕಿ ಏಷ್ಯಾ ಪ್ರಶಸ್ತಿಯನ್ನು ಪಡೆದುಕೊಂಡು ಭಾರತೀಯ ಮಹಿಳೆ ಯಾರು?
a) ಕಿರಣ್ ಮಜುಂದಾರ್ ಷಾ 
b) ಆರುಂಧತಿ ರಾಯ್
c) ಶಬಾನ ಆಜ್ಮಿ                   
d) ಮೇಧಾ ಪಾಟ್ಕರ್

6) 1950ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಯೋಜನಾ ಆಯೋಗದ ಬದಲಿಗೆ ಇಂದು ಯಾವ ಆಯೋಗ ಚಾಲ್ತಿಯಲ್ಲಿದೆ?
a) ಆರ್ಥಿಕ ಆಯೋಗ     b) ನೀತಿ ಆಯೋಗ
c) ಯೋಜನೆಗಳ ಆಯೋಗ    d) ಯಾವುದು ಇಲ್ಲ

7) ಹಳ್ಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಆಯೋಗ ಯಾವುದು?
a) ಕೆ. ಎಲ್. ಮುನ್ಷಿ ಆಯೋಗ b) ಹರೀತ್ ಸಾಳ್ವೆ ಆಯೋಗ
c) ಬಲವಂತರಾಯ್ ಮೆಹ್ತಾ ಆಯೋಗ
d) ನ್ಯಾ. ಕುಲಭೂಷಣ್ ಆಯೋಗ

8) ಮೊಟ್ಟಮೊದಲ ಬಾರಿಗೆ ನ್ಯೂಕ್ಲಿಯರ್ ರಿಯಾಕ್ಟರ್ ಅನ್ನು ಯಾವ ದೇಶದಲ್ಲಿ ಅಭಿವೃದ್ಧಿಪಡಿಸಲಾಯಿತು?
a) ಚೀನಾ b) ರಷ್ಯಾ   c) ಜಪಾನ್ d) ಅಮೆರಿಕ

9) ಅಲ್ಲಮಪ್ರಭುಗಳು - ಗುಹೇಶ್ವರ ಆದರೆ, ಮಡಿವಾಳ ಮಾಚಿದೇವರು …?
a) ಮಾರಯ್ಯಪ್ರಿಯ ಅಮರೇಶ್ವರ b) ಕಲಿದೇವರ ದೇವ
c) ನಿಜಾತ್ಮರಾಮರಾಮ d) ರಾಮನಾಥ

10) ನೇಪಾಳದ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ?  
a) ಪುಷ್ಪಕಮಲ್ ದಹಲ್ ಪ್ರಚಂಡ   
b) ದೀಪ್‌ ಕುಮಾರ್‌ ಉಪಾಧ್ಯಾಯ c)  ವಿದ್ಯಾ ದೇವಿ ಭಂಡಾರಿ
d) ಶೆರ್ ಬಹಾದುರ್ ದೇವುಬಾ

ಉತ್ತರಗಳು
1-d, 2-c, 3- b, 4-a, 5-a, 6-b, 7- c, 8-d, 9-b, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.