ADVERTISEMENT

ಪ್ರಜಾವಾಣಿ ಕ್ವಿಜ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST

1) ಭಾರತದಲ್ಲಿ ಉರ್ದು ಮತ್ತು ಪರ್ಷಿಯನ್ ಸಾಹಿತ್ಯಕ್ಕೆ ನೀಡಲಾಗುವ ಶ್ರೇಷ್ಠ ಪ್ರಶಸ್ತಿ ಯಾವುದು?
a) ನೆಹರೂ ಸಾಹಿತ್ಯ ಪ್ರಶಸ್ತಿ
b) ಭಟ್ನಾಗರ್ ಪ್ರಶಸ್ತಿ
c) ಗಲೀಬ್ ಸಾಹಿತ್ಯ ಪ್ರಶಸ್ತಿ
d) ಈ ಮೇಲಿನ ಎಲ್ಲವೂ

2) ಇಂದಿರಾ ಗಾಂಧಿ ಹತ್ಯೆಯ ತನಿಖೆಗಾಗಿ ಕೇಂದ್ರ ಸರ್ಕಾರ ಠಕ್ಕರ್ ಆಯೋಗವನ್ನು ರಚನೆ ಮಾಡಿತ್ತು. ಹಾಗಾದರೆ ರಾಜೀವ್ ಗಾಂಧಿ ಹತ್ಯೆಯ ತನಿಖೆಗಾಗಿ ಕೇಂದ್ರ ಸರ್ಕಾರ ಯಾವ ಆಯೋಗವನ್ನು ರಚನೆ ಮಾಡಿತ್ತು?
a) ಎಂ.ಸಿ. ಜೈನ್ ಆಯೋಗ
b) ಮುಖರ್ಜಿ ಆಯೋಗ
c) ಪದ್ಮರಾಜ ಆಯೋಗ
d) ವೊಲ್ಕರ್ ಆಯೋಗ

3) ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮಹಾತ್ಮ ಗಾಂಧಿ ಅವರ ಹೆಸರನ್ನು ಈ ಕೆಳಕಂಡ ಯಾವ ಯಾವ ವರ್ಷಗಳಲ್ಲಿ ಸೂಚಿಸಲಾಗಿತ್ತು?
a) 1937 b) 1939
c) 1948 d) ಮೇಲಿನ ಎಲ್ಲವೂ

ADVERTISEMENT

4) ಈ ಕೆಳಕಂಡ ಕೃತಿಗಳಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಆಡ್ವಾಣಿ ಬರೆದ ಪುಸ್ತಕವನ್ನು ಗುರುತಿಸಿ?
a) ರೀ ಮೇಕಿಂಗ್ ಇಂಡಿಯಾ
b) ವಿಂಗ್ಸ್ ಆಫ್ ಫೈರ್
c) ದಿ ಲೈನ್ ಆಫ್ ಕಂಟ್ರೋಲ್
d) ಮೈ ಕಂಟ್ರಿ ಮೈ ಲೈಫ್

5) ಕೇಂದ್ರಿಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ಇರುವ ರಾಜ್ಯ ಹಾಗೂ ನಗರವನ್ನು ಗುರುತಿಸಿ?
a) ಕರ್ನಾಟಕ-ಹಾಸನ
b) ಹಿಮಾಚಲ ಪ್ರದೇಶ-ಶಿಮ್ಲಾ
c) ಪಂಜಾಬ್-ಚಂಡಿಗಢ
d) ಮಹಾರಾಷ್ಟ್ರ-ನಾಗಪುರ

6) ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಬಸವ ಇಂದಿರಾ ಗ್ರಾಮೀಣ ವಸತಿ ಯೋಜನೆಯ ಮುಖ್ಯ ಉದ್ದೇಶ ಏನು?
a) ಗುಡಿಸಲು ಮುಕ್ತ ರಾಜ್ಯ ನಿರ್ಮಾಣ
b) ಗುಡಿಸಲು ಮುಕ್ತ ಬೆಂಗಳೂರು ನಿರ್ಮಾಣ
c) ಗುಡಿಸಲು ಮುಕ್ತ ನಗರಗಳ ನಿರ್ಮಾಣ
d) ಮೇಲಿನ ಯಾವುದೂ ಅಲ್ಲ

7) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ಕಾಯ್ದೆ ರೂಪಿಸಿದ ವರ್ಷ ಯಾವುದು?
a) 2005, ಜೂನ್ 25
b) 2005, ಆಗಸ್ಟ್ 25
c) 2005, ಆಕ್ಟೋಬರ್ 25
d) 2005, ಡಿಸೆಂಬರ್ 25

8) ಇತ್ತೀಚೆಗೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರವಾಗಿ ವಾದ ಮಾಡಿದ ಹಿರಿಯ ವಕೀಲ ಯಾರು?
a) ಪ್ರದೀಕ್ ಪಟೇಲ್ b) ಹರೀಶ್ ಸಾಳ್ವೆ
c) ಪಾಲಿ ನಾರಿಮನ್ d) ಶ್ಯಾಂ ಬೆನಗಲ್

9) ಭಾರತದ ಮೊಟ್ಟಮೊದಲ ಚುನಾವಣಾ ಆಯುಕ್ತರು ಯಾರು?
a) ಕೆ.ವಿ.ಕೆ. ಸುಂದರಂ
b) ನಾಗೇಂದ್ರ ಸಿಂಗ್
c) ಡಾ. ಮುಕುಲ್ ಬ್ಯಾನರ್ಜಿ
d) ಸುಕುಮಾರ್ ಸೇನ್

10) ಸಂವಿಧಾನದ ತಿದ್ದುಪಡಿ ವಿಧಾನವನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
a) ಜರ್ಮನಿ   b) ಆಸ್ಟ್ರೇಲಿಯಾ
c) ದಕ್ಷಿಣ ಆಫ್ರಿಕಾ d) ಅಮೆರಿಕ
ಉತ್ತರಗಳು: 1-c, 2-a, 3- d, 4-d, 5-b, 6-a, 7-b, 8-b, 9-d, 10-c.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.