ADVERTISEMENT

ಸೋಮವಾರ, 10 , 2017

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST

1) ಬ್ರಿಟನ್‌ನ ಕಾದಂಬರಿಕಾರ ಕಜುವೊ ಇಷಿಗುರೊ ಅವರಿಗೆ ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಘೋಷಣೆಯಾಗಿದೆ. ಈ ಕೆಳಕಂಡವುಗಳಲ್ಲಿ ಅವರ ಕೃತಿಯನ್ನು ಗುರುತಿಸಿ?
a) ಎ ಪೇಲ್‌ ವ್ಯೂ ಆಫ್‌ ಹಿಲ್ಸ್‌ b) ದ ರಿಮೈನ್ಸ್‌ ಆಫ್‌ ದ ಡೇ c) ದ ಬರೀಡ್‌ ಜೈಂಟ್‌ d) ಮೇಲಿನ ಎಲ್ಲವೂ

2) ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಮನಾಥ್ ಕೋವಿಂದ್ ಅವರು ಮೊಟ್ಟಮೊದಲ ಬಾರಿಗೆ ಯಾವ ದೇಶಕ್ಕೆ ಪ್ರವಾಸ ಕೈಗೊಂಡಿದ್ದರು?
a) ಕೀನ್ಯಾ b) ನೇಪಾಳ c) ಡಿಜಿಬೋಟಿ d) ಪೆರು

3) ಬ್ಯಾಂಕ್ ಬೋರ್ಡ್ ಬ್ಯೂರೊದ ಶಿಪಾರಸ್ಸಿನ ಅನ್ವಯ ರಜನೀಶ್ ಕುಮಾರ್ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಬ್ಯಾಂಕ್ ಬೋರ್ಡ್ ಬ್ಯೂರೊದ ಮುಖ್ಯಸ್ಥರು ಯಾರು?
a) ಅರುಂಧತಿ ಭಟ್ಟಾಚಾರ್ಯ b) ವಿನೋದ್ ರೈ c) ರಜನೀಶ್ ಕುಮಾರ್ d) ಇಂದಿರಾ ನೋಹಿ

ADVERTISEMENT

4) ಈ ಕೆಳಕಂಡ ರಾಜ್ಯಗಳು ಮತ್ತು ರಾಜ್ಯಪಾಲರಲ್ಲಿ ಸರಿಯಾಗಿರುವುದನ್ನು ಗುರುತಿಸಿ.
a) ಮೇಘಾಲಯ – ಗಂಗಾ ಪ್ರಸಾದ್‌ b) ತಮಿಳುನಾಡು – ಬನ್ವಾರಿ ಲಾಲ್ ಪುರೋಹಿತ್   c) ಬಿಹಾರ – ಸತ್ಯ ಪಾಲ್ ಮಲಿಕ್‌ d) ಮೇಲಿನ ಎಲ್ಲವೂ

5) ಇತ್ತೀಚೆಗೆ ಕೇಂದ್ರ ಸರ್ಕಾರ ಗುಜರಾತ್‌ ರಾಜ್ಯದ ಯಾವ ಬಂದರು ಮಂಡಳಿಗೆ ದೀನ್‌ ದಯಾಳ್‌ ಬಂದರು ಮಂಡಳಿ ಎಂದು ಮರುನಾಮಕರಣ ಮಾಡಿತು?
a) ಸೂರತ್ b) ಕಾಂಡ್ಲ c) ಮಾಂಡ್ವಿ d) ಪೋರಬಂದರು

6) ಮಹಾತ್ಮಗಾಂಧೀಜಿ ಅವರ ಜಯಂತಿಯ ದಿನವಾದ ‘ಅಕ್ಟೋಬರ್‌ 2’ರಂದು ಯಾವ ಅಂತರರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ?
a) ಅಂತರರಾಷ್ಟ್ರೀಯ ಅಹಿಂಸಾ ದಿನ b) ಅಂತರರಾಷ್ಟ್ರೀಯ ಸತ್ಯದ ದಿನ c) ಅಂತರರಾಷ್ಟ್ರೀಯ ಮದ್ಯಪಾನ ನಿಷೇಧ ದಿನ d) ಅಂತರರಾಷ್ಟ್ರೀಯ ಸ್ವಾತಂತ್ರ್ಯ ದಿನ

7) ಇತ್ತೀಚೆಗೆ ಲೋಕಾರ್ಪಣೆಗೊಂಡ ಕೇಂದ್ರ ಸರ್ಕಾರದ ’ಸೌಭಾಗ್ಯ’ ಯೋಜನೆ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ?
a) ಮಹಿಳೆಯರಿಗೆ ಹಣಕಾಸು ನೆರವು b) ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ c) ವಿದ್ಯುತ್ ಸಂಪರ್ಕ d) ಉಚಿತ ಪಡಿತರ

8) ಮೊಘಲರ ಆಳ್ವಿಕೆಯ ಕಾಲದಲ್ಲಿ ‘ಘಾಸಿ’ ಎಂಬ ಬಿರುದನ್ನು ಹೊಂದಿದ್ದ ದೊರೆ ಯಾರು?
a) ಬಾಬರ್ b) ಹುಮಾಯೂನ್ c) ಆಕ್ಬರ್ d) ಜಹಾಂಗೀರ್

9) ವರ್ದಮಾನ ಮಹಾವೀರ ಜೈನ ಧರ್ಮದ 24 ತೀರ್ಥಂಕರನಾದರೆ, ಜೈನಧರ್ಮದ ಮೊದಲ ತೀರ್ಥಂಕರ ಯಾರು?
a) ಧರ್ಮನಾಥ b) ಶಾಂತಿನಾಥ  c) ಅಜಿತನಾಥ d) ಋಷಭದೇವ

10) ಸ್ವಾತಂತ್ರ್ಯದ ಅನಂತರದಲ್ಲಿ ಭಾರತ ಯಾವ ದೇಶಗಳ ನಡುವೆ ಯುದ್ಧ ಮಾಡಿದೆ?
a) ಭೂತಾನ್–ಶ್ರೀಲಂಕಾ b) ಪಾಕಿಸ್ತಾನ–ಚೀನಾ c) ಜಪಾನ್–ಬ್ರಿಟನ್ d) ಬಾಂಗ್ಲಾದೇಶ–ಶ್ರೀಲಂಕಾ

ಉತ್ತರಗಳು 1-d, 2-c, 3- b, 4-d, 5-b, 6-a, 7-c, 8-a, 9-d, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.