ADVERTISEMENT

`ಅಂಪೈರ್ ಏಳು ಬಾರಿ ತಪ್ಪು ಮಾಡಿದ್ದು ನಿಜ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ದುಬೈ (ಪಿಟಿಐ): ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಅಂಪೈರ್‌ಗಳು ಏಳು ಸಲ ತಪ್ಪು ಎಸಗಿದ್ದು ನಿಜ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಒಪ್ಪಿಕೊಂಡಿದೆ.

`ಪಂದ್ಯದ ವೇಳೆ ಏಳು ಸಲ ತಪ್ಪುಗಳನ್ನು ಎಸೆಗಿರುವುದು ಅಂಪೈರ್‌ಗಳ ತಂಡದ ಮೌಲ್ಯಮಾಪನದ ವೇಳೆ ತಿಳಿದು ಬಂದಿದೆ. ಅದರಲ್ಲಿ ಮೂರು ಸರಿಪಡಿಸಲಾಗದ ತೀರ್ಪುಗಳಿವೆ. ನಾಲ್ಕು ನಿರ್ಣಯಗಳನ್ನು ಅಂಪೈರ್ ತೀರ್ಪು ಪುನರ್‌ಪರಿಶೀಲನಾ ಪದ್ಧತಿ ಸೌಲಭ್ಯವನ್ನು (ಯುಡಿಆರ್‌ಎಸ್) ಉಪಯೋಗಿಸಿ ಸರಿಪಡಿಸಲಾಗಿದೆ' ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೇ `ಯುಡಿಆರ್‌ಎಸ್ ಉಪಯೋಗಿಸುವ ಮುನ್ನ ಶೇಕಡಾ 90.3 ರಷ್ಟು ಸರಿಯಾದ ನಿರ್ಣಯಗಳು ದೊರೆಯುತ್ತಿದ್ದವು. ಆದರೆ ಡಿಆರ್‌ಎಸ್ ಉಪಯೋಗಿಸಿದಾಗಿನಿಂದ ಅದು ಶೇಕಡಾ 95.8 ರಷ್ಟಕ್ಕೆ ಏರಿಕೆಯಾಗಿದೆ. ಒಟ್ಟಾರೆ 2012-13ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಡಿಆರ್‌ಎಸ್ ಉಪಯೋಗದಿಂದಾಗಿ ಸರಿಯಾದ ತೀರ್ಪುಗಳಲ್ಲಿ ಸರಾಸರಿ ಶೇಕಡಾ 5.5 ರಷ್ಟು ಏರಿಕೆ ಕಂಡು ಬಂದಿದೆ' ಎಂದೂ ಐಸಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.