ADVERTISEMENT

ಆಳ್ವಾಸ್ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:36 IST
Last Updated 8 ಏಪ್ರಿಲ್ 2018, 19:36 IST
ಬಳ್ಳಾರಿಯಲ್ಲಿ ಭಾನುವಾರ ನಡೆದ ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಆಳ್ವಾಸ್ ತಂಡದವರು. ಜಯಲಕ್ಷ್ಮೀ, ಡಿ.ಎಸ್.ಸುಶ್ಮಿತಾ, ಎಚ್‌.ರೇಖಾ, ಅಕ್ಷತಾ (ವ್ಯವಸ್ಥಾಪಕಿ), ಬಿ.ಡಿ.ಲಾವಣ್ಯ, ಎಂ.ಸುಶ್ಮಿತಾ, ಎಚ್‌.ಎಂ.ತೇಜಶ್ರೀ (ನಿಂತವರು; ಎಡದಿಂದ), ಎಸ್‌.ಕೆ.ಪಲ್ಲವಿ, ಕೆ.ಜಿ.ಯಶಸ್ವಿನಿ (ನಾಯಕಿ)

ಬಳ್ಳಾರಿ: ಸೂಪರ್‌ ಲೀಗ್‌ ಮಾದರಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದ ಮೂಡಬಿದಿರೆಯ ಆಳ್ವಾಸ್ ಮಹಿಳಾ ತಂಡದವರು ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸೂಪರ್‌ ಲೀಗ್‌ ಪಂದ್ಯಗಳು ನಡೆದವು. ಚೆನ್ನೈನ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯ ಎರಡನೇ ಸ್ಥಾನ ಪಡೆಯಿತು. ಆಳ್ವಾಸ್‌ ತಂಡಕ್ಕೆ ₹ 15 ಸಾವಿರ, ರನ್ನರ್ಸ್‌ ಅಪ್‌ ತಂಡಕ್ಕೆ ₹ 10 ಸಾವಿರ ಬಹುಮಾನ ಲಭಿಸಿತು. ಬಳ್ಳಾರಿಯ ಶ್ರವಣ ಇನ್‌ಸ್ಟಿಟ್ಯೂಟ್‌ ಮೂರನೇ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ಭುವನೇಶ್ವರದ ಈಸ್ಟ್‌ಕೋಸ್ಟ್‌ ರೈಲ್ವೆ, ಮುಂಬೈನ ಪಶ್ಚಿಮ ರೈಲ್ವೆ  ಮತ್ತು ಚೆನ್ನೈನ ದಕ್ಷಿಣ ರೈಲ್ವೆ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ಸಮ ಪಾಯಿಂಟ್ಸ್‌ ಹೊಂದಿದ್ದವು.

ADVERTISEMENT

ಆದರೆ ತಂಡಗಳ ಗೆಲುವಿನ ಪಾಯಿಂಟ್ಸ್‌ ಅಂತರದ ಆಧಾರದ ಮೇಲೆ ಈಸ್ಟ್‌ಕೋಸ್ಟ್‌ ತಂಡ ಚಾಂಪಿಯನ್ ಆಗಿ ₹ 50 ಸಾವಿರ ಬಹುಮಾನ ಪಡೆದುಕೊಂಡಿತು. ರನ್ನರ್ಸ್‌ ಅಪ್‌ ಆದ ಪಶ್ಚಿಮ ರೈಲ್ವೆ ತಂಡಕ್ಕೆ ₹ 30 ಸಾವಿರ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.