ADVERTISEMENT

ಆ್ಯಂಡರ್ಸನ್, ಟ್ರಾಟ್‌ಗೆ ವಿಶ್ರಾಂತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಪುಣೆ (ಪಿಟಿಐ): ಮುಂದಿನ ತಿಂಗಳು ನಡೆಯಲಿರುವ ಭಾರತ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ  ಆ್ಯಂಡರ್ಸನ್ ಹಾಗೂ ಜೊನಾಥನ್ ಟ್ರಾಟ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಮುಂದಿನ ಎರಡು ಟ್ವೆಂಟಿ-20 ಪಂದ್ಯಗಳಿಗೂ ತಂಡವನ್ನು ಪ್ರಕಟಿಸಲಾಗಿದೆ. ಯುವ ಆಟಗಾರರಾದ ಕ್ರೀಸ್ ವೊಕೆಸ್ ಮತ್ತು ಜೊಸ್ ಬಟ್ಲರ್ ಅವರಿಗೆ ಸ್ಥಾನ ದೊರೆತಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರಲ್ಲಿ ಗೆಲುವು ಸಾಧಿಸಿ ಸಂಭ್ರಮದಲ್ಲಿರುವ ಇಂಗ್ಲೆಂಡ್ ಯುವ ಆಟಗಾರರಿಗೆ ಮಣೆ ಹಾಕಿದೆ. ಪುಣೆಯಲ್ಲಿ ಡಿಸೆಂಬರ್ 20ರಂದು ಹಾಗೂ ಮುಂಬೈಯಲ್ಲಿ 22ರಂದು ಟಿ-20 ಪಂದ್ಯಗಳು ನಡೆಯಲಿವೆ. ಈ ಎರಡು ಪಂದ್ಯಗಳ ಬಳಿಕ ಆಂಗ್ಲರ ಪಡೆ ತವರಿಗೆ ತೆರಳಲಿದೆ.

ಟಿ-20 ತಂಡದ ನಾಯಕ ಸ್ಟುವರ್ಟ್ ಬ್ರಾಡ್ ಬದಲು ಜೋ ರೂಟ್ ಸ್ಥಾನ ಗಿಟ್ಟಿಸಿದ್ದಾರೆ. ಎಯೋನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಜನವರಿ 11ರಂದು ಏಕದಿನ ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಆಂಗ್ಲರ ಪಡೆ ಐದು ಏಕದಿನ ಪಂದ್ಯಗಳನ್ನು ಆಡಲಿದೆ.

ತಂಡ ಇಂತಿವೆ: ಟ್ವೆಂಟಿ-20 ತಂಡ: ಎಯೋನ್ ಮಾರ್ಗನ್ (ನಾಯಕ), ಜಾನಿ ಬೈಸ್ಟೋವ್, ಟಿಮ್ ಬ್ರೆಸ್ನಿನ್, ಡ್ಯಾನಿ ಬ್ರಿಗ್ಸ್, ಜಾಸ್ ಬಟ್ಲರ್, ಜೆ. ಡೆರ್ನ್‌ಬಾಚ್, ಅಲಿಕ್ಸ್ ಹಾಲೆಸ್, ಮೈಕಲ್ ಲಂಬ್, ಸ್ಟುವರ್ಟ್ ಮೀಕರ್, ಸಮಿತ್ ಪಟೇಲ್, ಜೇಮ್ಸ ಟ್ರೆಡ್‌ವೆಲ್, ಲುಕೆ ರೈಟ್, ಜೋ ರೂಟ್ ಮತ್ತು ಜೇಮ್ಸ ಹ್ಯಾರಿಸ್.

ಏಕದಿನ ತಂಡ:  ಅಲಸ್ಟೇರ್ ಕುಕ್ (ನಾಯಕ), ಜಾನಿ ಬೈಸ್ಟೋವ್, ಇಯಾನ್ ಬೆಲ್, ಟಿಮ್ ಬ್ರೆಸ್ನನ್, ಡ್ಯಾನಿ ಬ್ರಿಗ್ಸ್, ಜೆ. ಡೆರ್ನ್‌ಬಾಚ್, ಸ್ಟೀವನ್ ಫಿನ್, ಕ್ರೇಗ್ ಕಿಸ್ವೆಟ್ಟರ್, ಸ್ಟುವರ್ಟ್ ಮೀಕರ್, ಎಯೋನ್ ಮಾರ್ಗನ್, ಸಮಿತ್ ಪಟೇಲ್, ಕೆವಿನ್ ಪೀಟರ್ಸನ್, ಜೇಮ್ಸ ಟ್ರೆಡ್‌ವೆಲ್, ಕ್ರಿಸ್ ವೊಕಸ್ ಹಾಗೂ ಜಾಸ್ ಬಟ್ಲರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.