ADVERTISEMENT

ಇಂದಿನಿಂದ ಹೊನಲು ಬೆಳಕಿನ ಟೆಸ್ಟ್‌

ಏಜೆನ್ಸೀಸ್
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಬೆನ್ ಸ್ಟೋಕ್ಸ್‌
ಬೆನ್ ಸ್ಟೋಕ್ಸ್‌   

ಆಕ್ಲಂಡ್‌ (ಎಎಫ್‌ಪಿ): ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಸೋತಿರುವ ನ್ಯೂಜಿಲೆಂಡ್ ತಂಡ ಗುರುವಾರ ಆರಂಭವಾಗುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಜಯದಾಖಲಿಸುವ ವಿಶ್ವಾಸ ಹೊಂದಿದೆ.

ತವರಿನಲ್ಲಿ ನ್ಯೂಜಿಲೆಂಡ್ ಈಗಾಗಲೇ 2–3ರಲ್ಲಿ ಏಕದಿನ ಸರಣಿ ಸೋತಿದೆ. ಆದರೆ ಟೆಸ್ಟ್ ಮಾದರಿಯಲ್ಲಿ ಈ ತಂಡ ಪ್ರಬಲ ಪೈಪೋಟಿ ಒಡ್ಡುವ ಹುಮ್ಮಸ್ಸಿನೊಂದಿಗೆ ಸಜ್ಜಾಗಿದೆ. ಆ್ಯಷಸ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಬೆನ್‌ ಸ್ಟೋಕ್ಸ್ ತಂಡಕ್ಕೆ ಮರಳಿರುವುದು ಇಂಗ್ಲೆಂಡ್‌ ತಂಡದ ಬಲ ಹೆಚ್ಚಿಸಿದೆ. ಮೊಯಿನ್‌ ಅಲಿಗೆ ಇದು 50ನೇ ಟೆಸ್ಟ್ ಪಂದ್ಯ ಎನಿಸಿದೆ.

ಈಡನ್ ಪಾರ್ಕ್‌ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ADVERTISEMENT

‘ಆಲ್‌ರೌಂಡರ್‌ಗಳು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬೆನ್ ಸ್ಟೋಕ್ಸ್ ಮರಳಿರುವುದು ಖುಷಿಯ ಸಂಗತಿ’ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.

ತಂಡಕ್ಕೆ ಮರಳಿದ ಟೇಲರ್‌: ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.

‘ಗಾಯಗೊಂಡಿದ್ದ ಟೇಲರ್‌ ಈಗ ಫಿಟ್‌ ಆಗಿದ್ದಾರೆ‘ ಎಂದು ನಾಯಕ ಕೇನ್ ವಿಲಿಯಮ್ಸನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.