ADVERTISEMENT

ಏಳನೇ ಪ್ರಶಸ್ತಿಯತ್ತ ಭಾರತದ ಚಿತ್ತ

ಮಹಿಳೆಯರ ಏಷ್ಯಾ ಕಪ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 19:53 IST
Last Updated 2 ಜೂನ್ 2018, 19:53 IST
ಕೌಲಾಲಂಪುರದಲ್ಲಿ ಭಾನುವಾರದಿಂದ ಆರಂಭವಾಗಲಿರುವ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಕಪ್ ಅನ್ನು ಹಾಲಿ ಚಾಂಪಿಯನ್ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅನಾವರಣಗೊಳಿಸಿದರು. -ಐಸಿಸಿ ಟ್ವಿಟರ್ ಚಿತ್ರ
ಕೌಲಾಲಂಪುರದಲ್ಲಿ ಭಾನುವಾರದಿಂದ ಆರಂಭವಾಗಲಿರುವ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಕಪ್ ಅನ್ನು ಹಾಲಿ ಚಾಂಪಿಯನ್ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅನಾವರಣಗೊಳಿಸಿದರು. -ಐಸಿಸಿ ಟ್ವಿಟರ್ ಚಿತ್ರ   

ಕೌಲಾಲಂಪುರ: ಭಾನುವಾರ ಇಲ್ಲಿ ಆರಂಭವಾಗಲಿರುವ ಮಹಿಳೆಯರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಕಿನರಾರಾ ಅಕಾಡೆಮಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ. ಭಾರತವು ಒಟ್ಟು ಆರು ಬಾರಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು ಈ ಬಾರಿಯು ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದೆ.

ಭಾರತ ತಂಡದಲ್ಲಿ ಅನುಭವಿ ಆಟಗಾರ್ತಿಯರು ಇದ್ದಾರೆ. ಉಪನಾಯಕಿ ಸ್ಮೃತಿ ಮಂದಾನ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ವೇದಾ ಕೃಷ್ಣಮೂರ್ತಿ, ತಾನ್ಯಾ ಭಾಟಿಯಾ, ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್, ಏಕ್ತಾ ಬಿಷ್ಠ್, ಯುವ ಪ್ರತಿಭೆ ಜೆಮಿಮಾ ರಾಡ್ರಿಗಸ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

ADVERTISEMENT

ಭಾರತ ತಂಡವು ಜೂನ್ 4ರಂದು ಥಾಯ್ಲೆಂಡ್, 6ರಂದು ಬಾಂಗ್ಲಾದೇಶ, 7ರಂದು ಶ್ರೀಲಂಕಾ ಮತ್ತು 8ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿಸಿರುವ ಈ ಟೂರ್ನಿಯು ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಏಷ್ಯಾದ ತಂಡಗಳಿಗೆ ಈ ಪೂರ್ವಾಭ್ಯಾಸದ ವೇದಿಕೆಯಾಗಿದೆ.

ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.