ADVERTISEMENT

ಏ.1ರಂದು ರ‌್ಯಾಲಿ ಡಿ ಮೈಸೂರ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಮೈಸೂರು: ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 1ರಂದು `ರ‌್ಯಾಲಿ ಡಿ ಮೈಸೂರ್~ ಮೋಟಾರ್ ರ‌್ಯಾಲಿಯನ್ನು ಆಯೋಜಿಸಲಾಗಿದೆ.

ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ರ‌್ಯಾಲಿಯನ್ನು ಆಯೋಜಿಸಲಾಗುತ್ತಿದೆ. ಈ ರ‌್ಯಾಲಿಯಲ್ಲಿ ವೃತ್ತಿಪರ ಮತ್ತು ನೊವೈಸ್ ಕ್ಲಾಸ್ ರೈಡರ್‌ಗಳು ಭಾಗವಹಿಸಬಹುದು.

ಒಟ್ಟು 200 ಕಿಲೋಮೀಟರ್ ರ‌್ಯಾಲಿ ಇದಾಗಿದ್ದು, ಮೈಸೂರು ಸುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ. ಹುಣಸೂರು ರಸ್ತೆಯ ರೂಸ್ಟ್ ಹೊಟೇಲ್‌ನಿಂದ ರ‌್ಯಾಲಿ ಆರಂಭವಾಗುತ್ತದೆ. ಒಟ್ಟು 1.5 ಲಕ್ಷ ರೂಪಾಯಿ ಪ್ರಶಸ್ತಿ ನಿಗದಿಪಡಿಸಲಾಗಿದೆ.

ಹೆಸರು ನೋಂದಾಯಿಸಲು ಮಾರ್ಚ್ 28 ಕೊನೆಯ ದಿನವಾಗಿದೆ. ವಿವರಗಳಿಗೆ; ಸುಧೀರ್ ಗಣಪತಿ (ಮೊ: 9620069767) ಅಥವಾ ರತನ್ ಪೊನ್ನಪ್ಪ (ಮೊ: 9480771724) ಅವರನ್ನು ಸಂಪರ್ಕಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.