ADVERTISEMENT

ಐಸಿಸಿ ರ‍್ಯಾಂಕಿಂಗ್ ನಲ್ಲಿ ಸ್ಥಾನ ಪಡೆದ ಆಫ್ಘನ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ದುಬೈ (ಪಿಟಿಐ): ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಐತಿಹಾಸಿಕ ಜಯ ದಾಖ ಲಿಸಿದ್ದ  ಆಫ್ಘಾನಿಸ್ತಾನ ತಂಡ ಮೊಟ್ಟ ಮೊದಲ ಬಾರಿಗೆ ಐಸಿಸಿ ರ‍್ಯಾಂಕಿಂಗ್ ನಲ್ಲಿ ಸ್ಥಾನ ಪಡೆದುಕೊಂಡಿದೆ.

ಬಾಂಗ್ಲಾ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 32ರನ್‌ ಗೆಲುವು ಪಡೆದಿದ್ದ ಆಫ್ಘನ್‌ ಈ ಜಯದೊಂದಿಗೆ ಒಟ್ಟು 32 ರೇಟಿಂಗ್‌ ಪಾಯಿಂಟ್‌ ಕಲೆಹಾಕುವ ಮೂಲಕ ರ‍್ಯಾಂಕಿಂಗ್ ನಲ್ಲಿ 12ನೇ ಸ್ಥಾನ ತನ್ನದಾಗಿಸಿಕೊಂಡಿದೆ.

ಆಫ್ಘನ್‌ ತಂಡ ಟೂರ್ನಿಯಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಬೇಕಿದ್ದು, ಎರಡರಲ್ಲೂ ಗೆಲುವು ಕಂಡರೆ ಸದ್ಯ 11ನೇ ಸ್ಥಾನದಲ್ಲಿರುವ ಐರ್ಲೆಂಡ್‌ ತಂಡವನ್ನು ಹಿಂದಿಕ್ಕಿ ಈ ಸ್ಥಾನಕ್ಕೆ ಬಡ್ತಿ ಪಡೆಯಲಿದೆ. ಆಫ್ಘನ್‌ ತಂಡ 2008ರಿಂದ ಐಸಿಸಿ ವಿಶ್ವ ಕ್ರಿಕೆಟ್‌ ಲೀಗ್‌ ಡಿವಿಷನ್‌ನಲ್ಲಿ ಆಡಿತ್ತು. 2011ರಲ್ಲಿ ಐಸಿಸಿ ಮಾನ್ಯತೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT