ADVERTISEMENT

ಕಾದು ನೋಡಲು ಬಿಸಿಸಿಐ ನಿರ್ಧಾರ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ ತಂಡ ಒಳಗೊಂಡ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್‌ ಸಾಬೀತಾದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ.

ಮುಂಬೈನ ಹಿರಿಯ ಆಟಗಾರ ರಾಬಿನ್‌ ಮಾರಿಸ್ ಅವರು ಗಾಲ್‌ ಕ್ರೀಡಾಂಗಣದ ಸಿಬ್ಬಂದಿಗೆ ಆಮಿಷ ಒಡ್ಡಿ ತಮಗೆ ಬೇಕಾದಂತೆ ಪಿಚ್ ಸಿದ್ಧಪಡಿಸಲು ಹೇಳಿದ್ದರು ಎಂದು ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಅಲ್‌ ಜಜೀರಾ ಚಾನೆಲ್ ಹೇಳಿತ್ತು.

2017ರ ಜುಲೈ 26ರಿಂದ 29ರ ವರೆಗೆ ನಡೆದ ಪಂದ್ಯ ಒಳಗೊಂಡಂತೆ ಮೂರು ಪಂದ್ಯಗಳಲ್ಲಿ ನಡೆದಿದೆ ಎನ್ನಲಾದ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಒಪ್ಪಿಕೊಂಡಿತ್ತು.

ADVERTISEMENT

‘ಐಸಿಸಿ ಈಗಾಗಲೇ ತನಿಖೆ ಆರಂಭಿಸಿದೆ. ಮೊದಲು ಅದು ಮುಕ್ತಾಯಗೊಳ್ಳಲಿ. ಮಾರಿಸ್ ತಪ್ಪಿತಸ್ಥ ಎಂದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.