ADVERTISEMENT

ಕಿಂಗ್ಸ್ ಇಲೆವೆನ್‌ಗೆ ಸುಲಭ ಜಯ: ಕತ್ತಲೆಯಲ್ಲಿ ಕರಗಿದ ಸೂಪರ್ ಕಿಂಗ್ಸ್ ಕನಸು

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST
ಕಿಂಗ್ಸ್ ಇಲೆವೆನ್‌ಗೆ ಸುಲಭ ಜಯ: ಕತ್ತಲೆಯಲ್ಲಿ ಕರಗಿದ ಸೂಪರ್ ಕಿಂಗ್ಸ್ ಕನಸು
ಕಿಂಗ್ಸ್ ಇಲೆವೆನ್‌ಗೆ ಸುಲಭ ಜಯ: ಕತ್ತಲೆಯಲ್ಲಿ ಕರಗಿದ ಸೂಪರ್ ಕಿಂಗ್ಸ್ ಕನಸು   

ಧರ್ಮಶಾಲಾ (ಪಿಟಿಐ): ಸತತ ಮೂರನೇ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಕನಸು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಅವತರಣಿಕೆಯಲ್ಲಿ `ಪ್ಲೆಆಫ್~ ತಲುಪುವ ಆಸೆಯೇ ಬತ್ತಿಹೋಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ  ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅದು ಆರು ವಿಕೆಟ್‌ಗಳಿಂದ ಸೋಲನುಭವಿಸಿತು.

ಹದಿನಾರು ಪಂದ್ಯಗಳನ್ನು ಆಡಿ ಲೀಗ್ ಹಂತದಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಿರುವ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಮೊದಲ ನಾಲ್ಕು ಸ್ಥಾನಗಳಲ್ಲಿ ಒಂದನ್ನು ತನ್ನದಾಗಿಸಿಕೊಳ್ಳುವುದು ಖಂಡಿತ ಕಷ್ಟ. ಏಕೆಂದರೆ ಅದಕ್ಕೆ ಕಿಂಗ್ಸ್ ಇಲೆವೆನ್, ರಾಯಲ್ ಚಾಲೆಂಜರ್ಸ್ ಹಾಗೂ ರಾಜಸ್ತಾನ ರಾಯಲ್ಸ್ ಪ್ರಬಲ ಪೈಪೋಟಿ ನೀಡುವ ಸ್ಥಿತಿಯಲ್ಲಿವೆ.

ADVERTISEMENT

ಕಿಂಗ್ಸ್ ಎದುರು ಜಯ ಸಾಧಿಸಿದ್ದರೆ ಸಂಕಷ್ಟಗಳು ದೂರವಾಗುವ ಸಾಧ್ಯತೆ ಇತ್ತು. ಆದರೆ ಇಲ್ಲಿ ಅದು ಬ್ಯಾಟಿಂಗ್‌ನಲ್ಲಿ ಬಲ ತೋರಲಿಲ್ಲ. `ಮಹಿ~ ಬಳಗದವರು ಇಪ್ಪತ್ತು ಓವರುಗಳಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಗಳಿಸಿದ್ದು ಕೇವಲ 120 ರನ್.

ಗೆಲುವಿನ ಗುರಿ ಕಿಂಗ್ಸ್ ಇಲೆವೆನ್‌ಗೆ ಕಷ್ಟದ್ದೆನಿಸಲೇ ಇಲ್ಲ. ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ (64; 46 ಎಸೆತ, 9 ಬೌಂಡರಿ, 2 ಸಿಕ್ಸರ್) ಅಜೇಯ ಆಟದ ನೆರವಿನಿಂದ ಕಿಂಗ್ಸ್ ಇಲೆವೆನ್ 16.3 ಓವರುಗಳಲ್ಲಿ 123 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿ ಆಯಿತು.

ಚೆನ್ನೈ ಸೂಪರ್ ಕಿಂಗ್ಸ್: 20 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 120

ಎಂ. ವಿಜಯ್ ಸಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಿ ಪ್ರವೀಣ್ ಕುಮಾರ್  10
ಮೈಕಲ್ ಹಸ್ಸಿ ಸಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಿ ಪ್ರವೀಣ್ ಕುಮಾರ್  07
ಸುರೇಶ್ ರೈನಾ ಸಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಿ ಅಜರ್ ಮಹ್ಮೂದ್  17
ಮಹೇಂದ್ರ ಸಿಂಗ್ ದೋನಿ ಸಿ ನಿತಿನ್ ಸೈನಿ ಬಿ ಪರ್ವಿಂದರ್ ಆವನಾ  06
ಡ್ವೇನ್ ಬ್ರಾವೊ ಸಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಿ ರ‌್ಯಾನ್ ಹ್ಯಾರಿಸ್  48
ರವೀಂದ್ರ ಜಡೇಜಾ ಸಿ ನಿತಿನ್ ಸೈನಿ ಬಿ ಪರ್ವಿಂದರ್ ಆವನಾ  13
ಅಲ್ಬಿ ಮಾರ್ಕೆಲ್ ಸಿ ಪ್ರವೀಣ್ ಕುಮಾರ್ ಬಿ ಅಜರ್ ಮಹ್ಮೂದ್  14
ಎಸ್.ಅನಿರುದ್ಧ ಔಟಾಗದೆ  01
ಆರ್.ಅಶ್ವಿನ್ ಔಟಾಗದೆ  00

ಇತರೆ: (ಬೈ-1, ಲೆಗ್‌ಬೈ-2, ವೈಡ್-1)  04

ವಿಕೆಟ್ ಪತನ: 1-17 (ಎಂ.ವಿಜಯ್; 2.6), 2-20 (ಮೈಕಲ್ ಹಸ್ಸಿ; 4.3), 3-42 (ಸುರೇಶ್ ರೈನಾ; 7.4), 4-46 (ಮಹೇಂದ್ರ ಸಿಂಗ್ ದೋನಿ; 10.2), 5-78 (ರವೀಂದ್ರ ಜಡೇಜಾ; 15.4), 6-112 (ಅಲ್ಬಿ ಮಾರ್ಕೆಲ್; 18.5), 7-119 (ಡ್ವೇನ್ ಬ್ರಾವೊ; 19.5).

ಬೌಲಿಂಗ್: ಪ್ರವೀಣ್ ಕುಮಾರ್ 4-0-18-2, ರ‌್ಯಾನ್ ಹ್ಯಾರಿಸ್ 4-0-24-1 (ವೈಡ್-1), ಅಜರ್ ಮಹ್ಮೂದ್ 4-0-28-2, ಪರ್ವಿಂದರ್ ಆವನಾ 4-0-12-2, ಡೇವಿಡ್ ಹಸ್ಸಿ 3-0-23-0, ಪಿಯೂಶ್ ಚಾವ್ಲಾ 1-0-12-0

ಕಿಂಗ್ಸ್ ಇಲೆವೆನ್ ಪಂಜಾಬ್: 16.3 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 123

ಆ್ಯಡಮ್ ಗಿಲ್‌ಕ್ರಿಸ್ಟ್ ಔಟಾಗದೆ  64
ಮನ್‌ದೀಪ್ ಸಿಂಗ್ ಬಿ ಅಲ್ಬಿ ಮಾರ್ಕೆಲ್  24
ನಿತಿನ್ ಸೈನಿ ಸಿ ಮಹೇಂದ್ರ ಸಿಂಗ್ ದೋನಿ ಬಿ ಡ್ವೇನ್ ಬ್ರಾವೊ  01
ಡೇವಿಡ್ ಹಸ್ಸಿ ಸಿ ಮಹೇಂದ್ರ ಸಿಂಗ್ ದೋನಿ ಬಿ ಡ್ವೇನ್ ಬ್ರಾವೊ  09
ಸಿದ್ದಾರ್ಥ್ ಚಿಟ್ನಿಸ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಬೆನ್ ಹಿಲ್ಫೆನ್ಹಾಸ್  11
ಅಜರ್ ಮಹ್ಮೂದ್ ಔಟಾಗದೆ  09

ಇತರೆ: (ಲೆಗ್‌ಬೈ-3, ವೈಡ್-2)  05

ವಿಕೆಟ್ ಪತನ: 1-51 (ಮನ್‌ದೀಪ್ ಸಿಂಗ್; 6.5), 2-55 (ನಿತಿನ್ ಸೈನಿ; 8.2), 3-69 (ಡೇವಿಡ್ ಹಸ್ಸಿ; 10.2), 4-114 (ಸಿದ್ದಾರ್ಥ್ ಚಿಟ್ನಿಸ್; 15.1).

ಬೌಲಿಂಗ್: ಬೆನ್ ಹಿಲ್ಫೆನ್ಹಾಸ್ 4-0-20-1, ಅಲ್ಬಿ ಮಾರ್ಕೆಲ್ 3.3-0-28-1 (ವೈಡ್-2), ರವಿಚಂದ್ರನ್ ಅಶ್ವಿನ್ 4-0-27-0, ಡ್ವೇನ್ ಬ್ರಾವೊ 3-0-18-2, ಯೋ ಮಹೇಶ್ 2-0-27-0

ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 6 ವಿಕೆಟ್‌ಗಳ ಗೆಲುವು.

ಪಂದ್ಯ ಶ್ರೇಷ್ಠ: ಆ್ಯಡಮ್ ಗಿಲ್‌ಕ್ರಿಸ್ಟ್ (ಕಿಂಗ್ಸ್ ಇಲೆವೆನ್ ಪಂಜಾಬ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.