ADVERTISEMENT

ಕೀನ್ಯಾ ಜೊತೆ ಭಾರತದ ನಂಟು...!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST
ಕೀನ್ಯಾ ಜೊತೆ ಭಾರತದ ನಂಟು...!
ಕೀನ್ಯಾ ಜೊತೆ ಭಾರತದ ನಂಟು...!   

ಬೆಂಗಳೂರು: ಕೀನ್ಯಾ ತಂಡದ ಆಟಗಾರರು ಭಾರತೀಯರಿಗೆ ಕೃತಜ್ಞರು. ಇಂಥದೊಂದು ಭಾವನೆ ಮೂಡಲು ಕಾರಣವೂ ಇದೆ. ವಿಶ್ವಕಪ್ ಕ್ರಿಕೆಟ್ ಆತಿಥ್ಯದ ಹೊಣೆ ಹೊತ್ತಿರುವ ದೇಶಗಳಲ್ಲಿ ಒಂದಾದ ಭಾರತದ ಕಂಪೆನಿಯೊಂದು ಕೀನ್ಯಾ ಕ್ರಿಕೆಟ್ ಪಡೆಗೆ ಆರ್ಥಿಕವಾಗಿ ಬೆಂಬಲ ನೀಡಿದೆ.

ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಜಿಮ್ಮಿ ಕಮಾಂಡೆ ನೇತೃತ್ವದ ಪಡೆಗೆ ಪ್ರಾಯೋಜಕತ್ವ ನೀಡಿರುವುದು ಭಾರತೀಯ ಮೂಲದ ಕರುತುರಿ ಗ್ಲೋಬಲ್ ಲಿಮಿಟೆಡ್. ಆದ್ದರಿಂದ ಭಾರತಕ್ಕೆ ಈ ತಂಡವು ಆಭಾರಿಯಾಗಿದೆ. ಕೆಳಮಟ್ಟದ ಕ್ರಿಕೆಟ್‌ನಿಂದ ಹಿಡಿದು ಕೀನ್ಯಾದ ಸೀನಿಯರ್ ತಂಡದವರಿಗೆ ಕರ್ನಾಟಕದ ಈ ಕಂಪೆನಿಯ ಪ್ರೋತ್ಸಾಹವಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಲು ಉದ್ಯಾನನಗರಿಗೆ ಬಂದಿದ್ದ ಕಮಾಂಡೆ ಬಳಗದ ಕ್ರಿಕೆಟಿಗರಿಗೆ ಕರುತುರಿ ವಿಶೇಷವಾಗಿ ವರ್ಣರಂಜಿತ ಸಮಾರಂಭವನ್ನು ಆಯೋಜಿಸಿ ಅಭಿನಂದಿಸಿತು.

ಕೀನ್ಯಾ ತಂಡದ ನಾಯಕ ಕಮಾಂಡೆ ಮಾತನಾಡಿ, ‘ಇದೊಂದು ವಿಶಿಷ್ಟವಾದ ಕ್ಷಣ. ನಮ್ಮ ದೇಶದಿಂದ ಹೊರಗೆ ಇದ್ದಾಗ ಇಷೆಂದು ದೊಡ್ಡ ಅಭಿನಂದನಾ ಸಮಾರಂಭವನ್ನು ಆಯೋಜಿಸಿ ಗೌರವ ನೀಡಲಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.