ADVERTISEMENT

ಕ್ವಾರ್ಟರ್ ಫೈನಲ್‌ಗೆ ಕೇರಳ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಧಾರವಾಡ: ಆತಿಥೇಯ ಕರ್ನಾಟಕ ತಂಡದ ಜೊತೆಗೆ ಕೇರಳ, ಪಂಜಾಬ್, ಬಿಹಾರ, ಆಂಧ್ರಪ್ರದೇಶ ಮತ್ತು ನವೋದಯ ವಿದ್ಯಾ ಸಂಸ್ಥೆಗಳು ಇಲ್ಲಿಯ ಪೊಲೀಸ್ ವಸತಿ ಶಾಲಾ ಮೈದಾನದಲ್ಲಿ ನಡೆದಿರುವ 57ನೇ ರಾಷ್ಟ್ರೀಯ 17 ವರ್ಷದೊಳಗಿನವರ ಕಬಡ್ಡಿ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ನಾಕೌಟ್ ಹಂತ ತಲುಪಿದವು.

ಕರ್ನಾಟಕದ ಬಾಲಕಿಯರು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ 48-9 (32-3)ರಿಂದ ಚಂಡೀಗಡ ತಂಡದ ವಿರುದ್ಧ ಜಯ ಸಾಧಿಸಿದರು. ಕರ್ನಾಟಕದ ಪಲ್ಲವಿ ರಕ್ಷಣೆಯಲ್ಲಿ ಮಿಂಚಿದರೆ, ಸೌಮ್ಯ ದಾಳಿಯಲ್ಲಿ ವಿಕ್ರಮ ತೋರಿದರು. ಅಪೂರ್ವ ಆಲ್‌ರೌಂಡ್ ಆಟದಿಂದ ಗಮನಸೆಳೆದರು. ತಾನಾಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದ ಕರ್ನಾಟಕ ತಂಡ ಆರು ಪಾಯಿಂಟ್‌ಗಳೊಂದಿಗೆ ಅಜೇಯವಾಗಿ ನಾಕೌಟ್ ಹಂತಕ್ಕೆ ನೆಗೆಯಿತು.

ದಿನದ ಇತರ ಲೀಗ್ ಪಂದ್ಯಗಳಲ್ಲಿ ಪಂಜಾಬ್ ತಂಡ 20-7 (6-2)ರಿಂದ ಛತ್ತೀಸ್‌ಗಡ ತಂಡದ ವಿರುದ್ಧವೂ; ಕೇರಳ ತಂಡ 28-8 (9-4)ರಿಂದ ಜಮ್ಮು-ಕಾಶ್ಮೀರ ತಂಡದ ಮೇಲೂ; ಹರಿಯಾಣ ತಂಡ 59-9 (20-2)ರಿಂದ ಗೋವಾ ತಂಡದ ವಿರುದ್ಧವೂ; ಮಹಾರಾಷ್ಟ್ರ ತಂಡ 57-9 (27-5)ರಿಂದ ದೆಹಲಿ ತಂಡದ ಮೇಲೂ; ಆಂಧ್ರ ಪ್ರದೇಶ ತಂಡ 39-25 (20-17)ರಿಂದ ನವೋದಯ ವಿದ್ಯಾ ಸಂಸ್ಥೆ ತಂಡದ ವಿರುದ್ಧವೂ ಜಯ ಸಾಧಿಸಿದವು.

ADVERTISEMENT

ಬಾಲಕರ ವಿಭಾಗದಲ್ಲಿ ಒಡಿಶಾ ತಂಡ 41-9 (17-5)ರಿಂದ ಪಾಂಡಿಚೇರಿ ತಂಡವನ್ನು; ಗುಜರಾತ್ ತಂಡ 34-20 (20-5)ರಿಂದ ಕೇರಳ ತಂಡವನ್ನು; ತಮಿಳುನಾಡು ತಂಡ 52-8 (43-7)ರಿಂದ ಜಮ್ಮು-ಕಾಶ್ಮೀರ ತಂಡವನ್ನು; ಪಶ್ಚಿಮ ಬಂಗಾಲ ತಂಡ 37-27 (18-13)ರಿಂದ ಬಿಹಾರ ತಂಡವನ್ನು; ಉತ್ತರ ಪ್ರದೇಶ ತಂಡ 30-14 (16-7)ರಿಂದ ಚಂಡಿಗಡ ತಂಡವನ್ನು; ನವೋದಯ ವಿದ್ಯಾ ಸಂಸ್ಥೆ ತಂಡ 36-35 (17-26)ರಿಂದ ವಿದ್ಯಾಭಾರತಿ ತಂಡವನ್ನು ಪರಾಭವಗೊಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.